SIRA : ಶಿರಾ ನಗರ ನಿವಾಸಿಗಳಿಗೆ ಯುಜಿಡಿ ನೀರಿನ ಸಮಸ್ಯೆ

 ಒಳಚರಂಡಿ ಸಮಸ್ಯೆ
ಒಳಚರಂಡಿ ಸಮಸ್ಯೆ
ತುಮಕೂರು

ಶಿರಾ :

ಶಿರಾ ನಗರದ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದ್ದು ವಾಸನೆಯಿಂದ ಮನೆಯಲ್ಲಿ ವಾಸಿಸಲು ಕಷ್ಟಪಡುವಂತಾಗಿದೆ. ಹೌದು ಶಿರಾ ನಗರದ 30 ನೇ ವಾರ್ಡ್‌  ಕೇಶವನಗರ ಬಡಾವಣೆ ಸೇರಿದಂತೆ ನಗರದ ವಿವಿದ ಬಡಾವಣೆಗಳಲ್ಲಿ ಅಳವಡಿಸಿರೋ ಯುಜಿಡಿ ಪೈಪ್ ಗಳಿಂದ ನೀರು ರಸ್ತೆ ಮೇಲೆ ಹರಿದು ಬರ್ತಿದ್ದು, ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ.

ಇನ್ನು ಶಿರಾ ನಗರದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದ್ರು ಕೂಡ ಕೊಳಚೆ ನೀರಿನ ಸಮಸ್ಯೆ ನಿವಾರಣೆ ಮಾತ್ರ ಕಂಡಿಲ್ಲ. ಯುಜಿಡಿ ನೀರು ರಸ್ತೆ ಮೇಲೆ ಹರಿಯುತ್ತಿರೋದ್ರಿಂದ ಇಡೀ ಏರಿಯಾವೇ ಗಬ್ಬೇದು ನಾರುತ್ತಿದೆ, ನಗರದಲ್ಲಿ ಮಣ್ಣಿನ ವಾಸನೆ ಬದಲು ದುರ್ವಾಸನೆ ಬಿರ್ತಿದ್ದು, ಇದ್ರಿಂದ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡೇ ವಾಸ ಮಾಡ್ತಾ ಇದ್ದು, ಅನಾರೋಗ್ಯದ ಭೀತಿ ಕಾಡುತ್ತಿದೆ. ಇಲ್ಲಿನ ಯುಜಿಡಿ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ರು ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಾ ಇದ್ದಾರೆ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಂಡು ಯುಜಿಡಿ ಸಮಸ್ಯೆಗೆ ಮುಕ್ತಿ ಕೊಡಿಸ್ತಾರಾ ಎಂದು ಕಾದುನೋಡಬೇಕಿದೆ.

Author:

...
Sub Editor

ManyaSoft Admin

share
No Reviews