ಶಿರಾ:
ಶಿರಾ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ರು ಅಭಿವೃದ್ದಿ ಮಾತ್ರ ಕುಂಠುತ್ತಲೇ ಸಾಗುತ್ತಿದೆ.. ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಮಾರ್ಪಾಡಾಗಿದೆ ಶಿರಾ ನಗರ.
ಶಿರಾದ ನಗರದಲ್ಲಿ ಒಳಚರಂಡಿ, ಮ್ಯಾನ್‌ಹೋಲ್ ಕಟ್ಟಿಕೊಂಡ ಪರಿಣಾಮ ಕೊಳಚೆ ನಗರದಲ್ಲಿ ಒಳಚರಂಡಿ, ಮ್ಯಾನ್‌ಹೋಲ್ ಕಟ್ಟಿಕೊಂಡ ಪರಿಣಾಮ ಕೊಳಚೆ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ. ಇದ್ರಿಂದ ದುರ್ನಾತ ಬೀರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಇದೆ.
ನಗರದ ಹೃದಯ ಭಾಗದಲ್ಲಿರುವಹಲವು ಬೀದಿಗಳುಸೇರಿ ಹಲುವಾರು ಕಡೆ ಯುಜಿಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಬಡವಣೆಯ ವಾಸಿಗಳು ನಗರಸಭೆ ಸದಸ್ಯರವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ 30ನೇ ವಾರ್ಡ್‌ನಲ್ಲಿ ನಗರಸಭೆ ಸದಸ್ಯರು ವಾಸಿಸುವ ಬಡಾವಣೆಯಾಗಿದ್ದು, ಯುಜಿಡಿ ನೀರು ತುಂಬಿ ಹರಿಯುತ್ತಿದೆ. ಯುಜಿಡಿ ನೀರು ರಸ್ತೆ ಹರಿಯುತ್ತಿದ್ರು ನಗರಸಭೆ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಹಿಂದೇಟು ಹಾಕುತ್ತಿದ್ದಾರೆ.
ನಿತ್ಯ ಈ ರಸ್ತೆಯಲ್ಲಿ ಶಾಲೆ, ದೇವಸ್ಥಾನ, ಕೆಲಸಗಳಿಗೆ ತೆರಳಲು ಯುಜಿಡಿ ನೀರನ್ನು ತುಳಿದುಕೊಂಡೇ ಓಡಾಡಬೇಕಿದೆ. ಇಷ್ಟಿದ್ದರೂ ಕೂಡ ಇತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.