ತುಮಕೂರು : ತುಮಕೂರಿನಲ್ಲಿ ಒಂದೇ ಒಂದು ಮಳೆಗೆ ಯುಜಿಡಿ ಬ್ಲಾಕ್‌

ತುಮಕೂರು : ತುಮಕೂರಿನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೂ ಸತತವಾಗಿ ಮಳೆಯಾಗಿದ್ದು ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ. ನಗರದ ಗಾರ್ಡನ್‌ ರಸ್ತೆಯಲ್ಲಿರೋ ಯುಜಿಡಿ ಚೇಂಬರ್‌ಗಳು ಕಟ್ಟಿಕೊಂಡಿದ್ದು, ಯುಜಿಡಿ ನೀರು ಭಾರೀ ಪ್ರಮಾಣದಲ್ಲಿ ರಸ್ತೆ ಮೇಲೆ ಹರಿಯುತ್ತಿದೆ. ಇದ್ರಿಂದ ಸ್ಥಳೀಯರು ವಾಸಿಸಲು ಆಗ್ತಿಲ್ಲ ಜೊತೆಗೆ ಸವಾರರು ಮೂಗು ಮುಚ್ಚಿಕೊಂಡು ಗಲೀಜು ನೀರಿನಲ್ಲೇ ಓಡಾಡುವ ದುಸ್ಥಿತಿ ಇದೆ.

ಮಳೆಯಿಂದಾಗಿ ಗಾರ್ಡನ್‌ ರಸ್ತೆಯಲ್ಲಿರೋ ಚೇಂಬರ್‌ಗಳು ಬೆಳಗ್ಗೆಯಿಂದಲೂ ಕಟ್ಟಿಕೊಂಡಿದ್ದು, ರಸ್ತೆ ಕೆರೆಯಂತಾಗಿದೆ. ರಸ್ತೆಯಲ್ಲಿ ಗಲೀಜು ನೀರು ಹೆಚ್ಚಾಗಿದ್ದು ಮನೆಗೆ ನುಗ್ಗುತ್ತಿದ್ದು ಚೇಂಬರ್‌ಗಳನ್ನು ಕ್ಲೀನ್‌ ಮಾಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗ್ತಾ ಇಲ್ಲ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ಪ್ರತಿ ಬಾರಿಯೂ ಮಳೆ ಬಂದಾಗಲು ಇಲ್ಲಿ ಯುಜಿಡಿ ನೀರು ಭಾರೀ ಪ್ರಮಾಣದಲ್ಲಿ ಹರಿಯುತ್ತೆ. ಗಲೀಜು ನೀರಿನಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದೇವೆ. ಇತ್ತ ಚರಂಡಿಗಳು ಕಟ್ಟಿಕೊಂಡು  ರಸ್ತೆಯಲ್ಲಿದ್ದ ನೀರು ಕೂಡ ಸರಾಗಿವಾಗಿ ಹರಿಯುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ರು. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ರು ಸಮಸ್ಯೆಯನ್ನು ಮಾತ್ರ ಬಗೆರಿಸ್ತಿಲ್ಲ ಅಂತಾ ಆಕ್ರೋಶ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು.

Author:

...
Keerthana J

Copy Editor

prajashakthi tv

share
No Reviews