ಉಡುಪಿ:
ಮೊಬೈಲ್ ನೋಡಬೇಡ ಎಂದು ತಾಯಿ ಬುದ್ದಿಮಾತು ಹೇಳಿದ್ದಕ್ಕೆ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿಯ ಬ್ರಹ್ಮಾವರದ ಸಾಸ್ತಾನದ ಕುಂಬಾರಬೆಟ್ಟು ಎಂಬಲ್ಲಿ ನಡೆದಿದೆ.
ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ ಎಂಬುವರ ಪುತ್ರಿ 16 ವರ್ಷದ ದಿಶಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಖಾಸಗೀ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದು, ಮೊಬೈಲ್ ಹಿಡಿದು ಕುಳಿತ್ತಿದ್ದಕ್ಕೆ ತಾಯಿ ಮಗಳಿಗೆ ಜಾಸ್ತಿ ಮೊಬೈಲ್ ನೋಡಬೇಡ ಎಂದು ಬುದ್ದಿವಾದ ಹೇಳಿ ಮೊಬೈಲ್ ಕಸಿದುಕೊಂಡಿದ್ದಾರೆ, ಕೋಪಗೊಂಡ ದಿಶಾ ರೂಂಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ, ಆಕೆಯ ತಾಯಿ ಎಷ್ಟು ಕೇಳಿದರೂ ಬಾಗಿಲು ತೆರೆಯದೇ ಇದ್ದಾಗ, ದಿಶಾ ಕಿಟಕಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ, ಕೂಡಲೇ ತಾಯಿ ಬಾರದಿದ್ದನ್ನು ಗಮನಿಸಿ ಕಿರುಚಾಡಿದ್ದಾರೆ, ತಕ್ಷಣವೇ ಅಕ್ಕಪಕ್ಕದ ಮನೆಯವರು ಕಿರುಚಾಟ ಕೇಳಿ ಬಂದು ಬಾಗಿಲು ಒಡೆದು ದಿಶಾಳನ್ನು ರಕ್ಷಿಸಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
ಸ್ಥಳಕ್ಕೆ ಕೋಟಾ ಕ್ರೈಂ ಪಿಎಸ್ ಐ ಸುಧಾಪ್ರಭು ಮತ್ತು ಎಎಸ್ ಐ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು. ಕೋಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.