ಗೋವಾ:
11 ಕೋಟಿ ರೂ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಬೆಂಗಳೂರು ಮೂಲದ ಯುವಕನನ್ನು ಬಂಧಿಸಿರುವಂತಹ ಘಟನೆ ಗೋವಾದಲ್ಲಿ ನಡೆದಿದೆ. ಮಾದಕ ದ್ರವ್ಯ ವಿರುದ್ದ ನಡೆಸಿದ ಕಾರ್ಯಚರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯ ಗುಪ್ತಚರ ಇಲಾಖೆ ಮಾಹಿತಿಯ ಮೆರೆಗೆ ಮಾದಕ ದ್ರವ್ಯ ತೆಗೆದುಕೊಂಡು ಗೋವಾಕ್ಕೆ ಬಂದಿದ್ದ ಯುವಕನನ್ನು ಪೊಲೀಸರು ಗುಯಿರಿಮ್ ನಲ್ಲಿ ಬಂಧಿಸಿದ್ದಾರೆ. ಒಂದೇ ದಿನದಲ್ಲಿ ಇಷ್ಟೊಂದು ಡೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದು ಇದೇ ಮೊದಲಾಗಿದೆ.
ಪ್ರಕರಣ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ಮಾತನಾಡಿ, ಮಾದಕ ದ್ರವ್ಯ ವಿರುದ್ಧ ನಡೆಸಿದ್ದ ಕಾರ್ಯಾಚರಣೆ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ಮಾದಕ ದ್ರವ್ಯ ಜಪ್ತಿ ಇದಾಗಿದೆ. ಯುವಕನ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.