ಶಿರಾ : ಸರ್ಕಾರಿ ಜಾಹೀರಾತು ಫಲಕಗಳ ಮೇಲೆ ಖಾಸಗಿ ದರ್ಬಾರ್..!

ಶಿರಾ ನಗರದಲ್ಲಿ ಹಾಕಿರುವ ಜಾಹೀರಾತು ಫಲಕಗಳು
ಶಿರಾ ನಗರದಲ್ಲಿ ಹಾಕಿರುವ ಜಾಹೀರಾತು ಫಲಕಗಳು
ತುಮಕೂರು

ಶಿರಾ :

ಶಿರಾ ನಗರದಲ್ಲಿ ಜಾಹೀರಾತು ಫಲಕಗಳ ಹಾವಳಿ ದಿನೇ ದಿನೆ ಹೆಚ್ಚಾಗಿದ್ದು, ಜಾಹೀರಾತು ಫಲಕಗಳಿಗೆ ಬ್ರೇಕ್‌ ಹಾಕಲು ನಗರಸಭೆ ವಿಫಲವಾಗಿದೆ. ಹೌದು ಶಿರಾ ನಗರದಲ್ಲಿ ಸರ್ಕಾರದ ಜಾಹೀರಾತಿಗಳ ಮೇಲೆ ಖಾಸಗಿ ಜಾಹೀರಾತುಗಳನ್ನು ಅಂಟಿಸಿರೋದು ನಗರಸಭೆ ಆಡಳಿತದ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ. ಹೌದು ಶಿರಾ ನಗರಸಭೆ ‌ಹಳೆಯ ಕಚೇರಿ ಮುಂಭಾಗ, ನಾರಾಯಣ ಸ್ವಾಮಿ ಕಲ್ಯಾಣ ಮಂಟಪದ ಆವರಣ ಸೇರಿದಂತೆ ವಿವಿಧ ಸರ್ಕಲ್‌ಗಳಲ್ಲಿ ಸರ್ಕಾರಿ ಜಾಹಿರಾತುಗಳ ಮೇಲೆ ಪರವಾನಗಿ ಇಲ್ಲದ ಖಾಸಗಿ ಜಾಹೀರಾತುಗಳನ್ನು ಅಂಟಿಸಲಾಗಿದೆ.

ಸರ್ಕಾರಿ ಜಾಹೀರಾತುಗಳ ಮೇಲೆ ಖಾಸಗಿ ಜಾಹೀರಾತುಗಳನ್ನು ಅಂಟಿಸಿದರು ಕೂಡ ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಅನಧೀಕೃತ ಫಲಕಗಳ ಜೊತೆ ಸರ್ಕಾರದ ನಾಮ ಫಲಕಗಳ ಬೋರ್ಡಗಳು ಮೇಲೆ ಖಾಸಗಿ ವ್ಯಕ್ತಿಗಳು ತಮ್ಮ ವಿವಿಧ ಜಾಹೀರಾತು ಪ್ರಚಾರ ಮಾಡ್ತಿದ್ದಾರೆ. ಹೌದು ಸರ್ಕಾರಿ ಜಾಹೀರಾತುಗಳ ಮೇಲೆ ಖಾಸಗಿ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಜಾತ್ರೆಗಳು, ಮನೆ ಬಾಡಿಗೆ, ಉದ್ಯೋಗ ಅವಕಾಶಗಳ ಇನ್ನು ಅನೇಕ ರೀತಿಯ ಜಾಹೀರಾತುಗಳು  ನಾಮ ಫಲಕಗಳನ್ನು ಅಳವಡಿಸ್ತಾ ಇದ್ದಾರೆ. ಪ್ರಭಾವಿ ವ್ಯಕ್ತಿಗಳು ಹಾಗೂ ದೊಡ್ಡ ದೊಡ್ಡ ವ್ಯಾಪಾರಸ್ಥರು ಇರುವ ಜಾಹೀರಾತುಗಳು ಎಗ್ಗಿಲ್ಲಿದೇ ಅಳವಡಿಸಲಾಗುತ್ತಿದೆ ಕ್ರಮ ಕೈಗೊಳ್ಳಲು ಮಾತ್ರ ಆಡಳಿತ ಅಧಿಕಾರಿಗಳು ವಿಫಲವಾಗಿದೆ.

Author:

...
Editor

ManyaSoft Admin

Ads in Post
share
No Reviews