ಚಿಕ್ಕನಾಯಕನಹಳ್ಳಿ:
ಮೊನ್ನೆಯಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಜಾಸ್ತಿನೇ ಇದೆ. ತುಮಕೂರಲ್ಲೂ ಮಳೆಯ ಅಬ್ಬರಕ್ಕೆ ಮರಗಳು ಉರುಳಿಬಿದ್ದಿವೆ. ಹಲವೆಡೆ ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಇತ್ತ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 9 ವರ್ಷದ ಬಾಲಕ ಸಾವನ್ನಪ್ಪಿದ್ದು, ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕನಾಯಕಹಳ್ಳಿಯ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಮಹೇಶ್ ಎಂಬುವವರ ಪುತ್ರ 9 ವರ್ಷದ ಕುಶಾಲ್ ರಾತ್ರಿ ವೇಳೆ ಬಹಿರ್ದೇ ಸೆಗೆದಂದು ಪಕ್ಕ ದಲ್ಲಿಯೇ ಇದ್ದ ತೋಟಕ್ಕೆ ತೆರಳಿದ್ದ. ಅಲ್ಲಿಯೇ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಬಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಮಗನ ಚಿರುಚಾಟ ಕೇಳಿ ಹೊರಬಂದ ತಂದೆಯ ಕಣ್ಣೆದುರೇ ಮಗನ ಜೀವ ಹೋಗಿದೆ. ಇನ್ನು ಮಗನನ್ನು ರಕ್ಷಿಸಲು ಮುಂದಾಗ ತಂದೆ ಮಹೇಶ್ ಕೂಡ ಕರೆಂಟ್ ಶಾಕ್ ಕೊಡೆದಿದೆ. ತಕ್ಷಣಕ್ಕೆ ಕರೆಂಟ್ ಹೋದ ಕಾರಣ ಮಹೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಆಗಮಿಸಿದ್ರು. ಇದೇ ವೇಳೆ ಕುಟುಂಬಸ್ಥರ ಆಕ್ರಂದ ನಕ್ಕೆ ಸ್ಪಂಧಿಸಿದ ಅವ್ರು ಕೂಡಲೇ ಬೆಸ್ಕಾಂ ಅಧಿಕಾರಿಗಳಿಗೆ ತಾಲೂಕಿನಾದ್ಯಂತ ಎಲ್ಲೆಲ್ಲಿ ಈ ರೀತಿಯ ತೋಟದ ಮೇಲೆ ಮತ್ತು ಮನೆಯ ಮೇಲೆ ಹಾದು ಹೋಗಿರುವ ತಂತಿಗಳನ್ನು ಬೇರೆ ಕಡೆ ಹಾಕಲು ಖಡಕ್ ಸೂಚನೆ ನೀಡಿದರು.
ಇತ್ತ ತಿಪಟೂರು ತಾಲೂಕಿನ ರಂಗಾಪುರದಲ್ಲಿಯೂ ಸುರಿದ ಬಾರಿ ಮಳೆಗೆ ಎಮ್ಮೆ ಮೇಯಿಸಲು ತೋಟಕ್ಕೆ ಹೋಗುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ 55 ವರ್ಷದ ಯೋಗೀಶ್ ಮತ್ತು ಎಮ್ಮೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕೂಡ ನಡೆದಿದೆ.
ಮಳೆ ಬರುವ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿಳು ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತವೆ. ಮನೆಯ ಮೇಲೆ ಮತ್ತು ತೋಟದ ಮೇಲೆ ಹಾದು ಹೋಗಿರುವ ತಂತಿಗಳ ಕುರಿತು ಎಚ್ಚರಿಕೆ ವಹಿಸಬೇಕು. ಆದ್ರೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಎರಡು ಜೀವಗಳು ಬಲಿಯಾಗಿವೆ. ಇತ್ತ ಬೆಸ್ಕಾಂ ಅಧಿಕಾರಿಗಳ ವಿರುದ್ಧ ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಆಕ್ರೋಶ ಹೊರಹಾಕಿದ್ದಾರೆ. ಮುಂದಾದರೂ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.