ಗುಬ್ಬಿ:
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಅದಲಗೆರೆ ಗ್ರಾಮದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಇಡೀ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿತ್ತು. ಇತ್ತ ಹೆಂಡ್ತಿ, ಮಕ್ಕಳನ್ನು ಕಳೆದುಕೊಂಡು ಗಂಡ ಮಹದೇವಯ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ರು. ಆದ್ರೀಗ ಮೂವರ ಸಾವಿನ ಪ್ರಕರಣಕ್ಕೆ ಟಿಸ್ಟ್ ಸಿಕ್ಕಿದ್ದು, ಪೊಲೀಸರ ತನಿಖೆಯಲ್ಲಿ ಸಾವಿನ ಬಗ್ಗೆ ಸತ್ಯ ಹೊರಬಿದ್ದಿದೆ.
ತಾಯಿ- ಮಕ್ಕಳ ಸೂಸೈಡ್ ಪ್ರಕರಣದ ತನಿಖೆಯನ್ನು ಚೇಳೂರು ಪೊಲೀಸರು ಕೈಗೊಂಡಿದ್ದು, ಸಾವಿಗೆ ಕಾರಣವನ್ನು ವರದಿಯಲ್ಲಿ ಬಹಿರಂಗಪಡಿಸಿದ್ದಾರೆ. ತಾಯಿ ವಿಜಯಲಕ್ಷ್ಮೀಗೆ ಸಕ್ಕರೆ ಕಾಯಿಲೆ ಅಂಟಿಕೊಂಡಿದ್ದು ತಾನು ಬದುಕುವುದಿಲ್ಲ ಎಂದು ಎಂದು ತನ್ನ ಅಂಗವಿಕಲ ಮಕ್ಕಳಿಗೆ ಬಲವಂತವಾಗಿ ನೇಣು ಹಾಕಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರೋ ಸ್ಫೋಟಕ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ತಾಯಿ ವಿಜಯಲಕ್ಷ್ಮೀ ನಾನು ಸತ್ತ ಬಳಿಕ ನನ್ನ ಮಕ್ಕಳನ್ನು ಯಾರು ನೋಡಿಕೊಳ್ಳುತಾರೆ ಎಂದು ಚಿಂತಿಸಿ, ಕೊನೆಗೆ ಮೂವರ ಪ್ರಾಣ ಒಂದೇ ಸಲ ಹೋಗಬೇಕು ಎಂದು ಆಲೋಚಿಸಿದ್ರು. ಹೀಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬುದ್ದಿಮಾಂಧ್ಯ, ಅಂಗವಿಕಲ ಮಕ್ಕಳಾದ ಚುಡಾಮಣಿ ಮತ್ತು ನರಸಿಂಹಮೂರ್ತಿಗೆ ಬಲವಂತವಾಗಿ ಕಾಲು ಕಟ್ಟಿ, ವೇಲಿನಿಂದ ಇಬ್ಬರಿಗೂ ನೇಣು ಬಿಗಿದು ತಾಯಿ ಕೊಲೆ ಮಾಡಿದ್ದಾಳೆ. ಮಕ್ಕಳ ಪ್ರಾಣಪಕ್ಷಿ ಹಾರಿಹೋದ ಬಳಿಕ ತಾಯಿ ವಿಜಯಲಕ್ಷ್ಮೀ ಕೂಡ ಸೀರೆಯಿಂದ ನೇಣಿಗೆ ಕೊರಳೊಡ್ಡಿದ್ದಾಳೆ ಎಂದು ತಿಳಿದು ಬಂದಿದೆ.
ಇನ್ನುಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ವರಿಷ್ಟಾಧಿಕಾರಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ರು.
ಸಕ್ಕರೆ ಕಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಆದ್ರೆ ಸಕ್ಕರೆ ಕಾಯಿಲೆ ಬಂದಾಕ್ಷಣ ಯಾರು ಸಾಯೋದಿಲ್ಲ.. ಹೀಗಿದ್ರು ತಾಯಿ ಸಕ್ಕರೆ ಕಾಯಿಲೆಗೆ ಹೆದರಿ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದು ಮಾತ್ರ ದುರಂತವೇ ಸರಿ… ಮೇಲ್ನೋಟಕ್ಕೆ ಸಕ್ಕರೆ ಕಾಯಿಲೆಯಿಂದ ತಾಯಿ ಈ ರೀತಿ ಕೃತ್ಯ ಎಸಗಿರೋದು ಕಂಡು ಬಂದಿದ್ದು, ಪ್ರಕರಣದ ತನಿಖೆ ಮುಗಿದ ಬಳಿಕವಷ್ಟೇ ತಾಯಿ-ಮಕ್ಕಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.