ತುಮಕೂರು :
9 ದಿನದಿಂದ ಕುಡಿಯಲು ನೀರು ಬಿಡ್ತಿಲ್ಲ ಅಂತಾ ಹೇಳಿ ಮಹಿಳೆಯರು ರೋಡ್‌ನಲ್ಲಿ ಬಿಂದಿಗೆ, ಬಕೆಟ್ ಇಟ್ಟು ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ವಾಟರ್ ಮ್ಯಾನ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಬೇಸಿಗೆ ಆರಂಭವಾಗಿದ್ದು, ಜನರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿಗೆ ಪಾಲಿಕೆ ಹೆಚ್ಚು ಒತ್ತು ನೀಡಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯವ ನೀರಿಲ್ಲದೆ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಪಾಲಿಕೆ ಮಾತ್ರ ಪ್ರತಿನಿತ್ಯ ಒಂದಿಲ್ಲೊಂದು ವಿಚಾರದಲ್ಲಿ ಸಾರ್ವಜನಿಕರಿಂದ ಬೈಯ್ಸಿಕೊಳ್ಳೋದು ತಪ್ತಿಲ್ಲ. 9 ದಿನಗಳಿಂದ ನೀರು ಬಿಟ್ಟಿಲ್ಲ ಅಂತ ತುಮಕೂರಿನ ಬೀ ಬೀ ಜಾನ್ ಕಾಂಪೌಂಡ್ 3 ನೇ ಕ್ರಾಸ್‌ನಲ್ಲಿರುವ ಮಹಿಳೆಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಎಂಎಲ್‌ಎ, ಕಾರ್ಪೋರೇಟರ್‌ಗಳು ಎಲೆಕ್ಷನ್ ಬಂದಾಗ ಮಾತ್ರ ಬರ್ತಾರೆ, ಕೈ ಮುಗಿತಾರೆ ಓಟ್ ಕೇಳ್ತಾರೆ. ಓಟ್ ಹಾಕಿದ ಮೇಲೆ ನಮಗೆ ತೊಂದರೆ ಬಂದರೆ ಬರೋದಿಲ್ಲ. ನಮಗೆ 9 ದಿನದಿಂದ ಕುಡಿಯೋಕೆ, ನಿತ್ಯದ ಬಳಕೆಗೆ ನೀರಿಲ್ಲ. ಇಂತಹ ಸಮಸ್ಯೆನ ಅಧಿಕಾರಿಗಳಿಗೆ ಹೇಳಿದರೇ ಕ್ಯಾರೆ ಅನ್ನಲ್ಲ. ಇನ್ನು ವಾಟರ್‌ಮ್ಯಾನ್‌ಗಳಂತು ಏನ್ ಹೇಳಿದರೂ ಕಿವಿಗೆ ಹಾಕೊಳ್ಳಲ್ಲ. ಮೊಟ್ರು ಪ್ರಾಬ್ಲಮ್, ಟ್ಯಾಂಕ್ ಸಮಸ್ಯೆಯಿಂದ ಅಂತ ಸಮಜಾಯಿಷಿ ಕೊಡ್ತಾರೆ ಅಂತ ಸಾರ್ವಜನಿಕರು ಕಿಡಿಕಾರಿದರು.
9 ದಿನದಿಂದ ನಮಗೆ ಕುಡಿಯುವ ನೀರು ಬರ್ತಿಲ್ಲ ಅಂತ ಇಂಜಿನಿಯರ್ ಕಂಪ್ಲೈಂಟ್ ಮಾಡಿದಿವಿ, ಆದರೆ ಅವರು ಕೂಡ ಏನು ಆಕ್ಷನ್ ತಗೊಂಡಿಲ್ಲ. ಇನ್ನು ಒಂದು ಟ್ಯಾಂಕ್ ನೀರು ಹೊಡೆಸಲು 500 ರಿಂದ 600 ರೂ ತಗೋತ್ತಾರೆ. ಕೂಲಿ ಮಾಡಿ ಬದ್ಕೋ ಜನ ನಾವು. ಎಲ್ಲಿಂದ ಅಷ್ಟೋಂದು ದುಡ್ಡು ತರಬೇಕು ಅಂತ ಸಾರ್ವಜನಿಕ್ರು ಬೇಸರ ವ್ಯಕ್ತಪಡಿಸಿದ್ರು
ಇಂತಹ ಬೇಸಿಗೆ ಸಮಯದಲ್ಲಿ ಸಾರ್ಜನಿಕರಿಗೆ ನೀರು ಒದಗಿಸುವ ಜವಾಬ್ದಾರಿ ಪಾಲಿಕೆಯದ್ದು. ಆದ್ರೆ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಹಿಳೆಯರು ಇಂದು ಬೀದಿಗಿಳಿದು ಪ್ರತಿಭಟನೆ ಮಾಡ್ತಿದಾರೆ. ಮುಂದಾದ್ರು ಸಾರ್ವಜನಿಕರ ಇಂತಹ ಜ್ವಲಂತ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.