ತುಮಕೂರು : ವಸಂತನರಸಾಪುರ ಕಾರ್ಖಾನೆಯಲ್ಲಿ ದುರಂತ ಕೇಸ್ | ಗ್ರಾಮಸ್ಥರ ಪ್ರತಿಭಟನೆಗೆ ಶಾಸಕ ಸುರೇಶ್ ಗೌಡ ಸಾಥ್

ತುಮಕೂರು : ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರೋ ಲೋರಸ್‌ ಬಯೋ ಕಂಪನಿಯಲ್ಲಿ ಕೆಮಿಕಲ್‌ ತುಂಬಿದ್ದ ಸಂಪನ್ನು ಸ್ವಚ್ಛಗೊಳಿಸಲು ಹೋಗಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಕಾರ್ಮಿಕರ ಸಾವಿಗೆ ಕುಟುಂಬಸ್ಥರು ಹಾಗೂ ತರೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಮಿಕರ ಸಾವಿಗೆ ನ್ಯಾಯಯುತ ತನಿಖೆಗೆ ಆಗ್ರಹಿಸಿ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದರು. ಲೋರಸ್‌ ಬಯೋ ಕಾರ್ಖಾನೆ ಮುಂದೆ ತರೂರು ಗ್ರಾಮದ ಗ್ರಾಮಸ್ಥರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರ ಪ್ರತಿಭಟನೆಗೆ ಶಾಸಕ ಸುರೇಶ್‌ ಗೌಡ ಕೂಡ ಸಾಥ್‌ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾದ ಶಾಸಕ ಸುರೇಶ್‌ಗೌಡ, ಗ್ರಾಮಸ್ಥರ ಜೊತೆ ಕೂತು ಕಾರ್ಖಾನೆ ಮಾಲೀಕರ ಪ್ರತಿಭಟನೆ ನಡೆಸಿ ಅಕ್ರೋಶ ಹೊರಹಾಕಿದ್ದು, ಕಾರ್ಖಾನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ, ಕಾರ್ಖಾನೆಯಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡ್ತಿದ್ದಾರೆ. ಕಾರ್ಖಾನೆಯ ಮಾಲೀಕರ ಪರವಾಗಿ ಪೊಲೀಸರು ಇದ್ದಾರಾ ಎಂದು ಸುರೇಶ್‌ ಗೌಡ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಕಾರ್ಖಾನೆಯಲ್ಲಿ ಇಬ್ಬರು ಕಾರ್ಮಿಕರ ಸಾವಿನ ಪ್ರಕರಣ ಸಂಬಂಧ ಸೂಕ್ತ ತನಿಖೆ ಮಾಡುವಂತೆ ಸಿಎಂ ಹಾಗೂ ಕಾರ್ಮಿಕರ ಸಚಿವರಿಗೆ ಪತ್ರ ಬರೆದು ಒತ್ತಾಯ ಮಾಡುತ್ತೇನೆ. ಪತ್ರ ಬರೆಯುವ ಮೂಲಕ ಕಾರ್ಮಿಕರ ಸಾವಿಗೆ ನ್ಯಾಯ ಕೊಡಿಸುತ್ತೇನೆ ಎಂದು ಶಾಸಕ ಸುರೇಶ್‌ ಗೌಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews