ತುಮಕೂರು :
ರಾಜ್ಯ ರಾಜಕೀಯದಲ್ಲಿ ಉಂಟಾಗಬಹುದಾಗಿದ್ದ ಅತ್ಯಂತ ದೊಡ್ಡ ಅಲ್ಲೋಲ ಕಲ್ಲೋಲವೊಂದು ಜಸ್ಟ್ ಮಿಸ್ ಆಗಿದೆ. ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಮಟ್ಟಹಾಕಲು ಮತ್ತೊಬ್ಬ ಪ್ರಭಾವಿ ನಾಯಕನೇ ‘ಹನಿಟ್ರ್ಯಾಪ್’ ಬಲೆ ಬೀಸಿರುವ ಬಗ್ಗೆ ಗಂಭೀರ ಆರೋಪವೊಂದು ಕೇಳಿ ಬಂದಿದ್ದು ರಾಜ್ಯದ ಜನರು ಬೆಚ್ಚಿಬಿದ್ದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿರುವ, ತುಮಕೂರು ಭಾಗದ ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಭರ್ಜರಿ ಯತ್ನವೊಂದು ನಡೆದಿತ್ತು, ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರ್ತಿದೆ. ರಾಜನಂತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾಗೆ ಬೀಳಿಸುವ ಮೂಲಕ ಅವರ ಚಾರಿತ್ರ್ಯ ವಧೆ ಮಾಡಿ ಆ ಮೂಲಕ ರಾಜಕೀಯವಾಗಿ ಮುಗಿಸುವ ತಂತ್ರವನ್ನು ಮತ್ತೊಬ್ಬ ಪ್ರಭಾವಿ ನಾಯಕ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಿಎಂ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ತುಮಕೂರು ಭಾಗದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ಗೆ ಬೀಳಿಸಲು ಯತ್ನ ನಡೆದಿತ್ತು. ಮತ್ತೊಬ್ಬ ಪ್ರಭಾವಿ ನಾಯಕನ ಟೀಂನಿಂದ ಸತತವಾಗಿ ಹನಿಟ್ರ್ಯಾಪ್ಗೆ ಬೀಳಿಸಲು ಪ್ರಯತ್ನಿಸಲಾಗಿತ್ತಂತೆ. ಆದರೆ ಹನಿಟ್ರ್ಯಾಪ್ ಬಗ್ಗೆ ಅನುಮಾನ ಬರುತ್ತಿದ್ದಂತೆ ಸಚಿವ ಈ ಹನಿಟ್ರ್ಯಾಪ್ ಟೀಮ್ನ ಬಣ್ಣ ಬಯಲು ಮಾಡಿ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರಂತೆ. ಹೀಗೆಂದು ಚರ್ಚೆಗಳು ನಡೆಯುತ್ತಿವೆ.
ಈ ಹನಿಟ್ರ್ಯಾಪ್ ಷಡ್ಯಂತ್ರ ಮಾಡಿದ್ದು ಯಾರು ಅನ್ನೋದನ್ನು ಕೇಳಿದರೆ ನೀವು ಇನ್ನಷ್ಟು ಶಾಕ್ ಆಗ್ತೀರಾ. ತುಮಕೂರು ಭಾಗದ ಪ್ರಭಾವಿ ಸಚಿವರಿಗೆ ಹನಿಟ್ರ್ಯಾಪ್ ಬಲೆ ಬೀಸಿದ ಷಡ್ಯಂತ್ರದ ಹಿಂದೆ ಮತ್ತೊಬ್ಬ ಪ್ರಭಾವಿ ನಾಯಕನ ಕೈವಾಡ ಇದೆಯಂತೆ. ಆ ಸಚಿವರನ್ನು ಖೆಡ್ಡಾಗೆ ಕೆಡವಿ ರಾಜಕೀಯವಾಗಿ ಮುಗಿಸಿದರೆ ತಮಗೆ ಪದೇ ಪದೇ ಸವಾಲಾಗಿ ಎದುರು ನಿಲ್ಲುತ್ತಿದ್ದ ಒಂದು ದಾರಿಯನ್ನು ಸುಗಮಗೊಳಿಸಿದಂತಾಗುತ್ತೆ ಎಂಬ ಲೆಕ್ಕಾಚಾರದಲ್ಲಿ ಆ ಪ್ರಭಾವಿ ಸಚಿವ ತುಮಕೂರು ಭಾಗದ ಈ ಸಚಿವರ ಮೇಲೆ ಹನಿಟ್ರ್ಯಾಪ್ ಷಡ್ಯಂತ್ರ ಮಾಡಿದ್ದರು ಎನ್ನಲಾಗ್ತಿದೆ.
ಯಾವಾಗ ಸಚಿವರಿಗೆ ಈ ಹನಿಟ್ರ್ಯಾಪ್ ತಂತ್ರ ಗೊತ್ತಾಯ್ತೋ, ತನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಅನುಮಾನ ಬಂತೋ, ಸಚಿವರು ಕಾಂಗ್ರೆಸ್ ಪಕ್ಷದ ವರಿಷ್ಠರು ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೂ ದೂರು ನೀಡಿದ್ದಾರಂತೆ.
ಹನಿಟ್ರ್ಯಾಪ್ ಷಡ್ಯಂತ್ರಕ್ಕೆ ಒಳಗಾದ ತುಮಕೂರು ಮೂಲದ ಪ್ರಭಾವಿ ಸಚಿವ ಸ್ವಲ್ಪ ಯಾಮಾರಿದ್ರೂ ಚಾರಿತ್ರ್ಯವಧೆ ಆಗುತ್ತಿತ್ತು. ಹೀಗಾಗಿ ಈ ಷಡ್ಯಂತ್ರವನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಮೂಲದ ಪ್ರಭಾವಿ ಸಚಿವ, ರಾಜಕೀಯ ಜೀವನದಲ್ಲಿ ಎಲ್ಲೂ ಎಡವದಂತೆ ಗಂಭೀರ ಹೆಜ್ಜೆಯನ್ನು ಇಟ್ಟು ಎದುರಾಳಿಗಳ ವಿರುದ್ಧ ಮತ್ತೆ ತೊಡೆ ತಟ್ಟಲು ಮುಂದಾಗಿದ್ದಾರಂತೆ.