ತುಮಕೂರು : ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಫ್ಯಾಕ್ಟ್ | ವರದಿ ಬಳಿಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ತುಮಕೂರು :

ತುಮಕೂರು ಗ್ರಾಮಾಂತರ ಕ್ಷೇತ್ರದ ಮಲ್ಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಂಕುಮ್ಮನಹಳ್ಳಿ ಗ್ರಾಮದಿಂದ ಹೆಗ್ಗೆರೆಗೆ ಹೋಗುವ 2 ಕಿಲೋ ಮೀಟರ್‌ ಉದ್ದದ ರಸ್ತೆ ಹಾಳಾಗಿ ಸುಮಾರು 3 ವಾಗಿದ್ರು ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿರಲಿಲ್ಲ. ರಸ್ತೆಗೆ ಡಾಂಬರು ಹಾಕುವುದಿರಲಿ, ಗುಂಡಿ ಮುಚ್ಚುವ ಕೆಲಸವನ್ನು ಮಾಡಿರಲಿಲ್ಲ. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಎರಡು ಬಾರಿ ವರದಿ ಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಶಾಸಕರು ಗ್ರಾಮದ ರಸ್ತೆ ಅಭಿವೃದ್ಧಿಗೆ 6 ಕೋಟಿ ಹಣವನ್ನು ಮಂಜೂರು ಮಾಡಿದ್ದಲ್ಲದೇ, ಗುದ್ದಲಿ ಮಾರ್ಚ್‌ 27 ರಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಗಿದೆ.

ಕುಂಕುಮ್ಮನಹಳ್ಳಿ ಗ್ರಾಮ ತುಮಕೂರು ನಗರದಿಂದ ಕೇವಲ 15 ಕಿಲೋ ಮೀಟರ್‌ ದೂರದಲ್ಲಿದೆ. ನಗರಕ್ಕೆ ಸಮೀಪವಿದ್ದರೂ ಕೂಡ ಈ ಗ್ರಾಮಕ್ಕೆ ರಸ್ತೆ ಸಂಪರ್ಕವೇ ಹಾಳಾಗಿ ಹೋಗಿತ್ತು. ಕಂಭತ್ತನಹಳ್ಳಿ, ಕೊತ್ತಿಹಳ್ಳಿ ಗ್ರಾಮದವರು ಕೂಡ ಕುಂಕುಮ್ಮನಹಳ್ಳಿ ಗ್ರಾಮದಿಂದಲೇ ಹೋಗಬೇಕಿತ್ತು. ನಿತ್ಯ ಸಾವಿರಾರು ಮಂದಿ ಗುಂಡಿಗಳ ರಸ್ತೆಯಲ್ಲೇ ಎದ್ನೋ ಬಿದ್ನೋ ಅಂತಾ ತುಮಕೂರಿಗೆ ಹೋಗ್ತಾ ಇದ್ದರು. ಇದು ರಸ್ತೆಯೋ ಅಥವಾ ಗುಂಡಿಗಳ ರಸ್ತೆಯೋ ಒಂದು ತಿಳಿಯುತ್ತಿರಲಿಲ್ಲ. ಮಳೆ ಬಂದರೆ ಗುಂಡಿಗಳ ತುಂಬಾ ನೀರು ತುಂಬಿಕೊಂಡು ಗುಂಡಿ ಯಾವುದೋ, ರಸ್ತೆ ಯಾವುದೋ ಒಂದು ಗೊತ್ತಾಗದೇ ಗುಂಡಿಗಳಲ್ಲಿ ಜನರು ಬಿದ್ದು ಆಸ್ಪತ್ರೆ ಪಾಲಾಗುತ್ತಿದ್ದರು. ಇನ್ನು ಬೇಸಿಗೆ ಬಂದರೆ ಬರೀ ಧೂಳು ಧೂಳು. ಧೂಳಿನಿಂದ ರಸ್ತೆಯೇ ಕಾಣದಂತಹ ಸ್ಥಿತಿ ನಿರ್ಮಾಣ ಆಗಿತ್ತು. ಅಷ್ಟೇ ಅಲ್ಲದೇ ಗುಂಡಿಗಳ ರಸ್ತೆಯಿಂದಾಗಿ ಗ್ರಾಮಕ್ಕೆ ಬರ್ತಾ ಇದ್ದ ಬಸ್‌ ಕೂಡ ನಿಲ್ಲಿಸಲಾಗಿತ್ತು.  ಇದರಿಂದ ಗ್ರಾಮದ ಸಂಚಾರಕ್ಕೆ ಸಂಚಕಾರಕ್ಕೆ ತಂದುಕೊಟ್ಟಿತ್ತು.

ಈ ಗ್ರಾಮದ ಜನರ ಕಷ್ಟದ ಬಗ್ಗೆ ಪ್ರಜಾಶಕ್ತಿ ಟಿವಿಯಲ್ಲಿ ಸುಮಾರು ಎರಡು ಬಾರಿ ವರದಿ ಮಾಡಿದ್ದರು. ವರದಿ ಮಾಡಿದ ಬಹು ದಿನಗಳ ಬಳಿಕ ಎಚ್ಚೆತ್ತ ಶಾಸಕ ಸುರೇಶ್‌ ಗೌಡ, ರಸ್ತೆ ಕಾಮಗಾರಿಗೆ ಸುಮಾರು 6 ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ. ಅಲ್ಲದೇ ಗುದ್ದಲೀ ಪೂಜೆ ನೇರವೇರಿಸಿದ್ದು ಈ ಗ್ರಾಮದ ಜಾತ್ರೆ ಮುಗಿದ ಬಳಿಕ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ಶಂಕರಯ್ಯ ಮಾಹಿತಿ ನೀಡಿದರು.

ಒಟ್ಟಿನಲ್ಲಿ ಸುಮಾರು 3 ವರ್ಷದಿಂದ ಸರಿಯಾದ ರಸ್ತೆ ಇಲ್ಲದೇ ಗ್ರಾಮಸ್ಥರು ಅನುಭವಿಸುತ್ತಿದ್ದ ನರಕಕ್ಕೆ ಅಂತೂ ಇಂತೂ ಒಂದು ಲೆಕ್ಕದಲ್ಲಿ ಮುಕ್ತಿ ಸಿಕ್ಕಿದೆ. ಆದರೆ ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಈಗಾಗಲೇ ಕಾಮಗಾರಿ ಮಾಡಿ ಮುಗಿಸಬೇಕಿತ್ತು. ಆದರೆ ಇನ್ನು ಕಾಮಗಾರಿ ಆರಂಭಿಸಲಿಲ್ಲ. ಹೀಗಾಗಿ ಕಾಮಗಾರಿಯನ್ನು ಬೇಗ ಮುಗಿಸಿ ಗ್ರಾಮಸ್ಥರ ಓಡಾಟಕ್ಕೆ ಮುಕ್ತಿ ಕೊಡಿಸ್ತಾರಾ..? ಎಂದು ಕಾದುನೋಡಬೇಕಿದೆ.

Author:

...
Editor

ManyaSoft Admin

share
No Reviews