ತುಮಕೂರು : ಸುಂಕ ಕಟ್ಟಿಸಿಕೊಂಡ್ರು ಕಸ ಎತ್ತದ ಪಾಲಿಕೆ | ಗಬ್ಬೇದ್ದು ನಾರುತ್ತಿದೆ ಮಾರ್ಕೆಟ್

ವ್ಯಾಪಾರಸ್ಥರು ಮಾರುಕಟ್ಟೆ ಸರ್ವೀಸ್‌ ರಸ್ತೆಯಲ್ಲಿ ಕಸ ಸುರಿದಿರುವುದು.
ವ್ಯಾಪಾರಸ್ಥರು ಮಾರುಕಟ್ಟೆ ಸರ್ವೀಸ್‌ ರಸ್ತೆಯಲ್ಲಿ ಕಸ ಸುರಿದಿರುವುದು.
ತುಮಕೂರು

ತುಮಕೂರು:

ಸ್ಮಾರ್ಟ್‌ ಸಿಟಿ, ಗ್ರೇಟರ್‌ ಸಿಟಿ ಅಂತಾ ನಮ್ಮ ತುಮಕೂರು ಸಿಟಿ ಸ್ವಚ್ಛತೆಯಲ್ಲಿ ತೀರಾ ಹಿಂದುಳಿದಿದೆ. ಕಸದ ರಾಶಿ ಬಿದ್ದಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಮಹಾನಗರ ಪಾಲಿಕೆ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ತುಮಕೂರು ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಕಸದ ಸಮಸ್ಯೆಗೆ ಕುಖ್ಯಾತಿಯನ್ನು ನಮ್ಮ ತುಮಕೂರು ಪಡೆದಿದೆ.

ತುಮಕೂರಿನ ಅತಿದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಅಂತರಸನಹಳ್ಳಿ ಬಳಿ ಇದೆ. ನಿತ್ಯ ಈ ಮಾರುಕಟ್ಟೆಗೆ ಸಾವಿರಾರು ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಬರ್ತಾರೆ, ಅಲ್ಲದೇ ತರಕಾರಿ ಹೂ- ಹಣ್ಣು, ತರಕಾರಿ ಖರೀದಿಗೆ ಸಾವಿರಾರು ಮಂದಿ ಜನರು ಬರ್ತಾರೆ. ಇಂತಹ ದೊಡ್ಡ ಮಾರುಕಟ್ಟೆಯಲ್ಲಿ ಕಸದ ನಿರ್ವಹಣೆಯೇ ದೊಡ್ಡ ಸಮಸ್ಯೆ ಆಗಿದೆ. ಮಾರುಕಟ್ಟೆಯಲ್ಲಿ ವೇಸ್ಟ್‌ ಆದ ತರಕಾರಿ ತ್ಯಾಜ್ಯವನ್ನು ಮಾರುಕಟ್ಟೆ ಹೊರ ಭಾಗದ ಸರ್ವೀಸ್‌ ರಸ್ತೆಗೆ ತಂದು ಸುರಿಯುತ್ತಾರೆ. ಆದರೆ ಕಸವನ್ನು ಎತ್ತಿಕೊಂಡು ಹೋಗುವ ಕೆಲಸ ಮಾತ್ರ ಪಾಲಿಕೆ ಮಾಡ್ತಾ ಇಲ್ಲ. ಇದರಿಂದ ಕಸ ಕೊಳೆತು ಗಬ್ಬು ನಾರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕಸ ನಿರ್ವಹಣೆ ಮಾಡಲು ಯಾವುದೇ ಜಾಗವಿಲ್ಲ. ಹೀಗಾಗಿ ವ್ಯಾಪಾರಸ್ಥರು ಮಾರುಕಟ್ಟೆ ಸರ್ವೀಸ್‌ ರಸ್ತೆ ಬಳಿ ತಂದು ಸುರಿಯುತ್ತಾರೆ. ಪಾಲಿಕೆಯವರು ಬೆಳಗ್ಗೆ 10 ಗಂಟೆ ಸುಮಾರಿಗೆ ಬರ್ತಾರೆ. ಆದರೆ ಅಲ್ಲಿರೋ ಕಸವನ್ನು ಎತ್ತುವ ಕೆಲಸ ಮಾಡ್ತಾ ಇಲ್ಲ. ಇದರಿಂದ ನಾಯಿ, ಹಂದಿ, ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ಜೊತೆಗೆ ಸುಮಾರು ದಿನಗಳಿಂದ ಕಸ ಅಲ್ಲಿಯೇ ಬಿದ್ದಿರೋದರಿಂದ ಕಸ ಕೊಳೆತು ಗಬ್ಬು ನಾರುತ್ತಿದೆ. ಪಾಲಿಕೆ ಅಧಿಕಾರಿಗಳು ಸುಂಕವನ್ನು ಮಾತ್ರ ಕಟ್ಟಿಸಿಕೊಳ್ಳುತ್ತಾರೆ ಆದರೆ ಕಸ ನಿರ್ವಹಣೆ ಮಾತ್ರ ಮಾಡ್ತಾ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

ಇನ್ನು ಪಾಲಿಕೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಂದಾಯ ವಸೂಲಿಗೆ ಬರ್ತಾರೆ. ಕಂದಾಯ ಕಟ್ಟಲಿಲ್ಲ ಅಂದರೆ ವ್ಯಾಪರಸ್ಥರಿಗೆ ನೋಟಿಸ್‌ ಕೊಟ್ಟು ಹೆದರಿಸ್ತಾರೆ. ಇಷ್ಟೆಲ್ಲ ಮಾಡುವ ಪಾಲಿಕೆ ಮಾರುಕಟ್ಟೆಯಲ್ಲಿ ಕಸದ ನಿರ್ವಹಣೆ ಮಾಡಲು ಮಾತ್ರ ಹಿಂದೇಟು ಹಾಕ್ತಾ ಇರೋದು ಬೇಸರದ ಸಂಗತಿಯಾಗಿದೆ.

ನಗರದಲ್ಲಿ ಕಸದ ಸಮಸ್ಯೆ ಬಗ್ಗೆ ನಿಮ್ಮ ಪ್ರಜಾಶಕ್ತಿ ವರದಿ ಮಾಡ್ತಾನೆ ಬಂದಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಮಾರುಕಟ್ಟೆ ಬಳಿ ಇರೋ ಕಸದ ಸಮಸ್ಯೆಗೆ ಮುಕ್ತಿ ಕೊಡಿಸಬೇಕಿದೆ.

Author:

...
Editor

ManyaSoft Admin

Ads in Post
share
No Reviews