ತುಮಕೂರು : ದುರ್ನಾತ ಬೀರುತ್ತಿವೆ ಹೂಗಳ ಹೆಸರಿರೋ ರಸ್ತೆಗಳು ...!

ತುಮಕೂರು : ಕಸದ ಸಮಸ್ಯೆಯಿಂದ ತುಮಕೂರು ನಗರದ ಸೌಂದರ್ಯ ಹಾಳಾಗ್ತಾ ಇದ್ದು, ಈ ಬಗ್ಗೆ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಮಾಡ್ತಾ ಇದೆ. ದಿನೇ ದಿನೇ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗ್ತಾ ಇದ್ದು, ಗಾರ್ಬೇಜ್‌ ಸಿಟಿ ಎಂಬ ಹಣೆಪಟ್ಟಿಗೆ ತುಮಕೂರು ನಗರದ ಸೇರುತ್ತಿದೆ. ನಗರದ ಕಸದ ಸಮಸ್ಯೆಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಒಂದ್ಕಡೆ ಕಾರಣವಾದರೆ, ಮತ್ತೊಂದು ಕಡೆ ಜನರ ಬೇಜವಾಬ್ದಾರಿ ಕೂಡ ಕಸದ ಸಮಸ್ಯೆಗೆ ಕಾರಣವಾಗ್ತಿದೆ. ಸ್ವಚ್ಛವಾಗಿರಬೇಕಿದ್ದ ಏರಿಯಾಗಳು ಗಬ್ಬೇದ್ದು ನಾರುವಂತ ಸ್ಥಿತಿ ಬಂದಿದ್ದು ಜನರು ಮೂಗು ಮುಚ್ಚಿಕೊಂಡು ಓಡಾಡೋ ಸ್ಥಿತಿ ಇದೆ.

ಪ್ರಜಾಶಕ್ತಿ ಟಿವಿ ಇಂದು ತುಮಕೂರಿನ ರಾಜೀವ್‌ಗಾಂಧಿ ನಗರದ 11ನೇ ವಾರ್ಡ್‌ನಲ್ಲಿ ಕಸದ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ದು, ಅಲ್ಲಿದ್ದ ವಾಸ್ತವ ಸ್ಥಿತಿಯನ್ನು ತೆರೆದಿಡಿದಿದೆ. 11ನೇ ವಾರ್ಡ್‌ನ ಹೇಮಾವತಿ ಬಡಾವಣೆಯ ಅಡ್ಡ ರಸ್ತೆಗಳಿಗೆ ಹೂಗಳ ಹೆಸರಾದ ಸೇವಂತಿ, ತುಳಸಿ ಎಂಬೆಲ್ಲಾ ಇತ್ಯಾದಿ ಹೂಗಳು ಹೆಸರನ್ನು ಇಡಲಾಗಿದೆ. ಆದರೆ ಸುಗಂಧ ಪರಿಮಳ ಬೀರಬೇಕಿದ್ದ ಹೂಗಳ ಹೆಸರಿಟ್ಟಿರೋ ಏರಿಯಾಗಳು ದುನಾರ್ತ ಬೀರುತ್ತಿರೋದು ವಿಪರ್ಯಾಸವೇ ಸರಿ.

ಇನ್ನು ರಸ್ತೆಯ ಬದಿಯಲ್ಲಿ ಅಕ್ಕಪಕ್ಕದ ನಿವಾಸಿಗಳು ಕಸವನ್ನು ತಂದು ಸುರಿಯೋದರಿಂದ ಕಸದ ಸಮಸ್ಯೆ ಉಂಟಾಗಿದೆ, ಪಾಲಿಕೆಯ ಕಸದ ಗಾಡಿಗಳು ಕೂಡ ಇಲ್ಲಿಗೆ ಸರಿಯಾಗಿ ಬರೋದಿಲ್ಲ ಹೀಗಾಗಿ ಜನರು ಕಸವನ್ನು ಇಲ್ಲಿಯೇ ಸುರಿದು ಹೋಗ್ತಾರೆ ಅಂತಾ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಜನರಿಗೂ ಕೂಡ ಕಸದ ಸಮಸ್ಯೆ ಬಗ್ಗೆ ಅರಿವು ಇರಬೇಕು. ಕಸವನ್ನು ಸಂಗ್ರಹಣೆ ಮಾಡಿಕೊಂಡು ಕಸದ ಗಾಡಿಗೆ ಹಾಕಬೇಕು ಬದಲಾಗಿ, ಇಲ್ಲಿ ತಂದು ಸುರಿಯೋದರಿಂದ ಕಸದಿಂದ ರೋಗ ಹೆಚ್ಚಾಗುವ ಭೀತಿ ಇದೆ. ಅಲ್ಲದೇ ಕಸದಿಂದ ನಾಯಿಗಳ ಸಮಸ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಕಸದ ಸಮಸ್ಯೆ ಬಗ್ಗೆ ಪಾಲಿಕೆ ಜೊತೆ ಜನರು ನಿರ್ಲಕ್ಷ್ಯ ತೋರಬಾರದು ಅಂತಿದ್ದಾರೆ ಇಲ್ಲಿನ ಸ್ಥಳೀಯರು.

ಅದೇನೆ ಆಗಲಿ ರಸ್ತೆ ಪಕ್ಕದಲ್ಲೇ ರಾಶಿ ರಾಶಿ ಕಸ ಬಿದ್ದಿದ್ದರೂ ಪಾಲಿಕೆ ಕೇರ್‌ ಮಾಡದೇ ಇರೋದು ಬೇಸರದ ಸಂಗತಿ. ಇತ್ತ ಕಸದ ಸಮಸ್ಯೆಯಿಂದ ನಮಗೆ ತೊಂದರೆ ಅಂತಾ ಗೊತ್ತಿದ್ದರೂ ಕೂಡ ಜನರು ನಿರ್ಲಕ್ಷ್ಯ ವಹಿಸಿರೋದು ದುರಂತ. ಇನ್ನಾದರೂ ಪಾಲಿಕೆ ಜೊತೆ ಜನರು ಕೂಡ ಎಚ್ಚೆತ್ತುಕೊಂಡು ಕಸದ ಸಮಸ್ಯೆ ನೋಡಿಕೊಂಡು ನಗರದ ಸೌಂದರ್ಯವನ್ನು ಕಾಪಾಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews