ತುಮಕೂರು: ಶಿವಲಿಂಗಕ್ಕೆ ಸ್ಪರ್ಶಿಸಿದ ಸೂರ್ಯ ರಶ್ಮಿ | ಭಕ್ತರು ಪುಳಕಿತ

ಸೋಮೇಶ್ವರ ದೇವಾಲಯದಲ್ಲಿ ಸೂರ್ಯನ ಕಿರಣಗಳು ಸ್ಪರ್ಶಿಸಿರುವುದು.
ಸೋಮೇಶ್ವರ ದೇವಾಲಯದಲ್ಲಿ ಸೂರ್ಯನ ಕಿರಣಗಳು ಸ್ಪರ್ಶಿಸಿರುವುದು.
ತುಮಕೂರು

ತುಮಕೂರು:

ತುಮಕೂರು ತಾಲೂಕಿನ ಕೋರ ಹೋಬಳಿಯ ಹಿರೇತೊಟ್ಲುಕೆರೆ ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ಮರು ದಿನ ಗುರುವಾರ ಬೆಳಿಗ್ಗೆ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳು ಸೋಮೇಶ್ವರ ದೇವರನ್ನು ಸ್ಪರ್ಷಿಸಿದೆ.

ಹಿರೇತೊಟ್ಲುಕೆರೆಯ ಸೋಮೇಶ್ವರ ದೇವಸ್ಥಾನಕ್ಕೆ 300 ವರ್ಷಗಳ ಇತಿಹಾಸವಿದೆ. ಸಂಕ್ರಾತಿಯಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಯಲದಲ್ಲಿ ಸೂರ್ಯನ ಕಿರಣಗಳು ಹೇಗೆ ಶಿವಲಿಂಗ ಸ್ಪರ್ಶಿಸುತ್ತವೆಯೋ ಅದೇ ರೀತಿ ಹಿರೇತೊಟ್ಲುಕೆರೆಯ ಗ್ರಾಮದಲ್ಲಿರುವ ಮಹಾಶಿವರಾತ್ರಿಯ ಮರುದಿನ ಸೋಮೇಶ್ವರ ದೇವಾಲಯದಲ್ಲೂ ಸಹ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಕಿರಣಗಳು ಸೋಮೇಶ್ವರ ದೇವರನ್ನು ಸ್ಪರ್ಷಿಸುತ್ತವೆ. ಸುತ್ತ ಮುತ್ತಲಿನ ಗ್ರಾಮಸ್ಥರು ಈ ವಿಸ್ಮಯವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಈ ದೇವಸ್ಥಾನವು ನೊಳಂಬ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದು, ಈ ದೇವಾಲಯಕ್ಕೆ ಸುಮಾರು 500 ರಿಂದ 600 ವರ್ಷಗಳ ಇತಿಹಾಸವಿದೆ.

Author:

...
Editor

ManyaSoft Admin

Ads in Post
share
No Reviews