TUMAKURU: ಅನೈತಿಕ ಚಟುವಟಿಕೆಗಳ ತಾಣಗಳಾಗ್ತಿವೆ ತುಮಕೂರಿನ ಪಾರ್ಕ್‌ಗಳು

ತುಮಕೂರು: 

ನಮ್ಮ ತುಮಕೂರು ಎರಡನೇ ರಾಜಧಾನಿಯಾಗಿ ಬದಲಾಗ್ತಿದ್ದು, ದಿನೇ ದಿನೆ ಅಭಿವೃದ್ಧಿಯತ್ತ ಸಾಗ್ತಾ ಇದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ನಗರದಲ್ಲಿ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದ್ರೆ ಸ್ವಚ್ಛತೆಯಲ್ಲಿ ನಗರ ತೀರಾ ಹಿಂದುಳಿದೆ. ನಗರದಲ್ಲಿ ಕಸದ ಸಮಸ್ಯೆ ಕೇವಲ ರಸ್ತೆ ಬದಿ, ಚರಂಡಿಯಲ್ಲಿ ಮಾತ್ರವಲ್ಲದೇ ಪಾರ್ಕ್‌ಗಳಲ್ಲಿಯೂ ಹೆಚ್ಚಾಗಿದ್ದು ನಗರದ ಮಾನ ಹರಾಜಾಗುವ ಕಾಲ ದೂರವಿಲ್ಲ,, ನಗರದ ಕೆಲ ಪಾರ್ಕ್‌ಗಳು ಅಸ್ವಚ್ಛತೆಯಿಂದ ಕೂಡಿರೋದು ಒಂದ್ಕಡೆ ಆದ್ರೆ, ಮತ್ತೊಂದ್ಕಡೆ ಪಾರ್ಕ್‌ಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿ ಬದಲಾಗ್ತಾ ಇದ್ದು ಸಾರ್ವಜನಿಕರಿಗೆ ಮುಜುಗರ ತರುವಂತಾಗಿದೆ.

ನಗರದ ಜ್ಯೂನಿಯರ್‌ ಕಾಲೇಜು ಮೈದಾನದ ಬಳಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಆಲದ ಮರದ ಪಾರ್ಕ್‌ನನ್ನು ಅಭಿವೃದ್ಧಿ ಮಾಡಲಾಗಿದೆ. ಬೆಳಗ್ಗೆ ಪಾರ್ಕ್‌ನಲ್ಲಿ ವಾಕ್‌ ಮಾಡಲು ಹಾಗೂ ಜಿಮ್‌ಗಾಗಿ ಜಿಮ್‌ ಮೆಟಿರಿಯಲ್‌ಗಳನ್ನು ಹಾಗೂ ಮಕ್ಕಳು ಆಟವಾಡಲು ಕೆಲ ಆಟಿಕೆಗಳನ್ನು ಅಳವಡಿಸಲಾಗಿದೆ. ಅಲ್ದೇ ವಿಶ್ರಾಂತಿಗಾಗಿ ಅಲ್ಲಲ್ಲಿ ಚೇರ್‌ಗಳನ್ನು ಕೂಡ ಅಳವಡಿಸಲಾಗಿದೆ. ಪಾರ್ಕ್‌ನ ಸುತ್ತಮುತ್ತಲ ಜನರು ಬೆಳಗ್ಗೆ ಸಂಜೆ ವಾಕ್‌ ಮಾಡ್ತಾರೆ. ದೂರದ ಊರಿಂದ ಬರುವ ಪ್ರಯಾಣಿಕರು ಮಧ್ಯಾಹ್ನದ ವೇಳೆ ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಆದ್ರೆ ಈ ಪಾರ್ಕ್‌ ಕಸದ ತೊಟ್ಟಿಯಾಗಿ ಬದಲಾಗ್ತಿದೆ. ಪಾಲಿಕೆ ಸಿಬ್ಬಂದಿ ಏನೋ ಕಸವನ್ನು ಗುಡಿಸಿ ಹೋಗ್ತಾರೆ ಆದ್ರೆ ಗುಡಿಸಿರೋ ಕಸವನ್ನು ಎತ್ತದೇ ಅಲ್ಲಿಯೇ ಬಿಟ್ಟಿದ್ದು, ಮಳೆಗೆ ಕಸ ಕೊಳೆತು ಗಬ್ಬು ನಾರುತ್ತಿದೆ. ಜೊತೆಗೆ ಸೊಳ್ಳೆಗಳ ಉತ್ಪತ್ತಿಯಾಗ್ತಿದ್ದು ಪಾರ್ಕ್‌ಗೆ ಬಂದವರು ರೋಗವನ್ನು ಹತ್ತಿಸಿಕೊಂಡು ಹೋಗುವಂತಾಗಿದೆ. ಕಸದ ರಾಶಿ ಬಿದಿದ್ರು ಪಾಲಿಕೆ ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದೆ.

ಇತ್ತ ಆಲದಮರದ ಪಾರ್ಕ್‌ ಅನೈತಿಕ ಚಟುವಟಿಕೆಗಳಾಗಿ ಬದಲಾಗ್ತಿದೆ. ಸಂಜೆ ವೇಳೆ ಕೆಲವರು ಈ ಪಾರ್ಕ್‌ನನ್ನು ಕುಡುಕರ ಅಡ್ಡೆಯಾಗಿ ಮಾಡಿಕೊಂಡಿದ್ದು, ಎಲ್ಲೆಂದರಲ್ಲಿ ಮದ್ಯದ ಬಾಟಲ್‌ಗಳು, ಗುಟ್ಕಾ, ಸಿಗರೇಟ್‌ ಪ್ಯಾಕ್‌ಗಳು ಬಿದ್ದಿರೋದು ಒಂದ್ಕಡೆ ಆದ್ರೆ, ಪಾರ್ಕ್‌ನಲ್ಲಿ ಹುಡುಗ ಹುಡುಗಿಯರು ಅಂಟಿಕೊಂಡು, ಅಸಭ್ಯವಾಗಿ ವರ್ತನೆ ಮಾಡ್ತಿರೋದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗ್ತಿದೆ. ಕಾಲೇಜಿಗೆ ಹೋಗಲು ಬಂದ ಯುವಕ- ಯುವತಿಯರು ಪಾರ್ಕ್‌ನಲ್ಲಿ ಅಂಟಿಕೊಂಡು ಗಂಟೆ ಗಟ್ಟಲೆ ಕೂತು ಅಸಭ್ಯವಾಗಿ ವರ್ತನೆ ಮಾಡ್ತಾ ಇದ್ದಾರೆ. ಇದ್ರಿಂದ ವಿಶ್ರಾಂತಿಗೆಂದು ಪಾರ್ಕ್‌ಗೆ ಬರುವ ಜನರು ಪ್ರೇಮಿಗಳ ಕಾಟಕ್ಕೆ ಬೇಸತ್ತಿದ್ದಾರೆ.

ಅದೇನೆ ಇರಲಿ ಸಾರ್ವಜನಿಕರ ಉಪಯೋಗಕ್ಕಾಗಿ ಪಾರ್ಕ್‌ಗಳನ್ನು ಏನೋ ನಿರ್ಮಾಣ ಮಾಡ್ತಾರೆ.. ಆದ್ರೆ ಪಾರ್ಕ್‌ಗಳನ್ನು ನಿರ್ವಹಣೆ ಮಾಡುವಲ್ಲಿ ಸಿಬ್ಬಂದಿ ವಿಫಲರಾಗಿದ್ದು, ಕಸದ ಸಮಸ್ಯೆಯಿಂದ ಪಾರ್ಕ್‌ಗಳು ಹಾಳಾಗ್ತಿವೆ.. ಇತ್ತ ಪಾರ್ಕ್‌ಗಳನ್ನು ಪ್ರೇಮಿಗಳು ಹಾಟ್‌ಸ್ಪಾಟ್‌ ಮಾಡಿಕೊಳ್ತಾ ಇದ್ದು, ಈ ಬಗ್ಗೆ ಇನ್ನಾದ್ರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಪಾರ್ಕ್‌ಗಳನ್ನು ಜನರಿಗೆ ಉಪಯೋಗವ ರೀತಿ ನಿರ್ವಹಣೆ ಮಾಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews