ತುಮಕೂರು : ಅದ್ದೂರಿಯಾಗಿ ನಡೆದ ಸೋಪನಹಳ್ಳಿ ತೋಪಿ ರಂಗನಾಥಸ್ವಾಮಿ ಜಾತ್ರೆ

ತುಮಕೂರು:

ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಸೋಪನಹಳ್ಳಿಯಲ್ಲಿ ನೆಲೆಸಿರುವ ಶ್ರೀ ತೋಪಿ ರಂಗನಾಥಸ್ವಾಮಿ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಸ್ವಾಮಿಯ ಜಾತ್ರಾ ಮಹೋತ್ಸವ ಅತ್ಯಂತ ವೈಭವ, ಸಡಗರದಿಂದ ನಡೆಯಿತು.

ಹೆಬ್ಬೂರು ಹೋಬಳಿಯ ಪುರಾತನ ಕಾಲದ ದೇವಾಲಯವಾಗಿರೋ ಸೋಪನಹಳ್ಳಿಯ ಶ್ರೀ ತೋಪಿ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾದರು. ಜಾತ್ರಾ ಮಹೋತ್ಸವದ ಹಿನ್ನೆಲೆ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬಳಿಕ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಂತರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಬ್ರಹ್ಮರಥೋತ್ಸವ ಜರುಗಿತು. ಭಕ್ತರು ಬಾಳೆಹಣ್ಣು. ದಾವಣದ ಹೂವನ್ನು ಎಸೆಯುವ ಮುಖಾಂತರ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತನನ್ನು ಪಾರ್ಥಿಸಿಕೊಂಡರು.

ಗೋವಿಂದಾ..ಗೋವಿಂದಾ ಎಂಬ ನಾಮಸ್ಮರಣೆಯೊಂದಿಗೆ ಭಕ್ತರು ತೇರನ್ನು ಎಳೆದರು. ಜಾತ್ರೆಯ ಪ್ರಯುಕ್ತ ಬಂದಿದ್ದ ಭಕ್ತರಿಗೆ ಗ್ರಾಮಸ್ಥರು ಹಾಗೂ ಭಕ್ತ ಸಮೂಹದಿಂದ ಪ್ರಸಾದದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿತ್ತು.

Author:

share
No Reviews