ತುಮಕೂರು : ಪ್ರಜಾಶಕ್ತಿ ವರದಿಗೆ ಪಾಲಿಕೆ ಅಲರ್ಟ್ | ಕಸದ ರಾಶಿ ಫುಲ್ ಕ್ಲೀನ್ ಕ್ಲೀನ್

ತುಮಕೂರು : 

ಪ್ರಜಾಶಕ್ತಿ ಮಾಧ್ಯಮ ತುಮಕೂರಿನ ಜನರ ನಾಡಿ ಮಿಡಿತವಾಗಿ ಕೆಲಸ ಮಾಡ್ತಾ ಇದೆ ಎಂದರೆ ತಪ್ಪಾಗಲಾರದು. ಸಣ್ಣ- ಸಣ್ಣ ಸಮಸ್ಯೆಗಳನ್ನು ಕೂಡ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುವ ಮೂಲಕ ಪ್ರಜಾಶಕ್ತಿ ತುಮಕೂರು ಜನರ ಮನ್ನಣೆ ಪಡೆದುಕೊಂಡಿದೆ. ಅದರಂತೆ ತುಮಕೂರು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದ ಕಸದ ಸಮಸ್ಯೆ ಬಗ್ಗೆ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಮಾಡ್ತಾನೆ ಬಂದಿದೆ. ಇದೀಗ ಪ್ರಜಾಶಕ್ತಿ ವರದಿಗೆ ಎಚ್ಚೆತ್ತ ಪಾಲಿಕೆ ಸಿಬ್ಬಂದಿ ಕಸದ ರಾಶಿಯನ್ನು ಎತ್ತುವ ಕೆಲಸ ಮಾಡಿದೆ. ಇದರಿಂದ ರಸ್ತೆ ಪಕ್ಕ ಫುಲ್‌ ಕ್ಲೀನ್‌ ಕ್ಲೀನ್‌ ಆಗಿದೆ.

ಕಳೆದ ಒಂದು ತಿಂಗಳ ಹಿಂದೆ ನಗರದ ಕೋತಿತೋಪು ಬಳಿಯ ಚೈತನ್ಯ ಟೆಕ್ನೋ ಶಾಲೆಯ ಆಟದ ಮೈದಾನದ ಪಕ್ಕದಲ್ಲಿದ್ದ ಕಾಂಪೌಂಡ್ ಬಳಿ ರಾತ್ರಿ ವೇಳೆ ಸಾರ್ವಜನಿಕರು ಕಸವನ್ನು ಸುರಿದು ಹೋಗ್ತಾ ಇರೋದರಿಂದ ಕಸದ ಸಮಸ್ಯೆ ತಲೆದೋರಿತ್ತು. ಕಸ ಸುಮಾರು ದಿನಗಳಿಂದ ಅಲ್ಲಿಯೇ ಬಿದ್ದಿದ್ದರಿಂದ ದುರ್ನಾತ ಬೀರಿ ಸುತ್ತಮುತ್ತಲ ನಾಗರೀಕರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿತ್ತು. ಈ ಬಗ್ಗೆ ಪ್ರಜಾಶಕ್ತಿ ವರದಿ ಮಾಡುವ ಮೂಲಕ ಪಾಲಿಕೆ ಸಿಬ್ಬಂದಿಯ ಕಣ್ತೆರೆಸುವ ಕೆಲಸವನ್ನು ಮಾಡಿತ್ತು. ವರದಿ ಮಾಡಿದ ಬೆನ್ನಲ್ಲೇ ಚೈತನ್ಯ ಟೆಕ್ನೋ ಸ್ಕೂಲ್‌ ಬಳಿ ಫುಲ್‌ ಕ್ಲೀನ್‌ ಕ್ಲೀನ್‌ ಮಾಡಲಾಗಿದೆ. ಇದು ಪ್ರಜಾಶಕ್ತಿ ಟಿವಿಯ ಫಲಶ್ರುತಿಯಾಗಿದೆ.

ಕಸದ ಸಮಸ್ಯೆಯಿಂದ ತುಮಕೂರು ನಗರದ ಸೌಂದರ್ಯ ಹಾಳಾಗ್ತಾ ಇದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಕಸದ ಸಮಸ್ಯೆ ಆಗದಂತೆ ಕಸದ ನಿರ್ವಹಣೆ ಮಾಡಬೇಕಿದೆ ಅನೋದು ಪ್ರಜಾಶಕ್ತಿ ಮಾಧ್ಯಮದ ಕಳಕಳಿಯಾಗಿದೆ.

Author:

...
Sushmitha N

Copy Editor

prajashakthi tv

share
No Reviews