ತುಮಕೂರು :
ಬಸವ ಜಯಂತಿ, ಅಕ್ಷಯ ತೃತೀಯ ಹಬ್ಬವನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಅಕ್ಷಯ ತೃತೀಯದಂದು ಮನೆಗೆ ಒಂದು ಗ್ರಾಂ ಚಿನ್ನ ಆದರೂ ಮನೆಗೆ ಕೊಂಡು ಹೋದರೆ ಮನೆಯಲ್ಲಿ ಸಂಪತ್ತು ವೃದ್ಧಿ ಆಗುತ್ತೆ ಅನ್ನೋದು ನಂಬಿಕೆ ಹೀಗಾಗಿ ಅಕ್ಷಯ ತೃತೀಯದಂದು ಮನೆಗೆ ಚಿನ್ನಕೊಳ್ಳೋದು ಸಂಪ್ರದಾಯದಂತೆ ಬೆಳೆದುಕೊಂಡು ಬಂದಿದೆ. ಅದರಲ್ಲೂ ವಿಶೇಷವಾಗಿ ಬಂಗಾರ ಹಾಗೂ ರಿಯಲ್ ಎಸ್ಟೇಟ್ಗೆ ಅಕ್ಷಯ ತೃತೀಯ ದಿನ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಕ್ಷಯ ಅಂದರೆ ಎಂದೂ ಕರಗದ ಅಥವಾ ಶಾಶ್ವತ ಎಂದು ಅರ್ಥ. ಈ ದಿನ ಬಂಗಾರ, ಬೆಳ್ಳಿ ಮತ್ತು ಆಸ್ತಿ ಖರೀದಿಯಿಂದ ಜೀವನ ಪರ್ಯಂತ ಯಶಸ್ಸು ಮತ್ತು ಸಂಪತ್ತು ಸಿಗುತ್ತೆ ಎಂಬ ನಂಬಿಕೆ ಜನರಲ್ಲಿದೆ. ಸಂಪ್ರದಾಯವನ್ನು ಉಳಿಸಿಕೊಂಡು ಬರುವ ನಿಟ್ಟಿನಲ್ಲಿ ಜನರಂಥೂ ಚಿನ್ನ ಖರೀದಿಯಲ್ಲಿ ಜನರು ಮುಳುಗಿದ್ದಾರೆ.
ಚಿನ್ನ, ಬೆಳ್ಳಿ ರೇಟ್ ದಿನದಿಂದ ದಿನಕ್ಕೆ ಏರಿಕೆ ಆಗ್ತಾ ಇದೆ, ಬೆಲೆ ಏರಿಕೆ ನಡುವೆಯೂ ಜನರು ಚಿನ್ನ ಖರೀದಿಗೆ ಮುಗಿಬಿದಿದ್ದಾರೆ. ಅಕ್ಷಯ ತೃತೀಯ ಹಬ್ಬದ ಅಂಗವಾಗಿ ಚಿನ್ನದಂಗಡಿಗಳಲ್ಲಿ ಜನರು ಇಷ್ಟ ಪಡುವಂತಹ, ನಾನಾ ಡಿಸೈನ್ ಚಿನ್ನದ ಸರ, ಓಲೆ, ಉಂಗುರ, ಬಳೆಗಳನ್ನು ತರಿಸಲಾಗಿತ್ತು. ತುಮಕೂರಿಗರು ಕೂಡ ಅಕ್ಷಯ ತೃತೀಯ ದಿನವನ್ನು ಬಹಳ ಅರ್ಥಪೂರ್ಣವಾಗಿ, ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡಿಕೊಂಡು ಬರಲಾಗಿದ್ದು, ಚಿನ್ನದ ಅಂಗಡಿಗಳತ್ತ ಮುಖ ಮಾಡಿದರು. ಇನ್ನು ಕಳೆದ ಬಾರಿಗಿಂತ ಈ ಬಾರಿ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡಿದ್ದು, ಚಿನ್ನ ಖರೀದಿಸುವ ಪ್ರಮಾಣದಲ್ಲಿ ಕಡಿಮೆ ಆಗಿದ್ದರು, ಚಿನ್ನ ಖರೀದಿಸುವವರು ಮಾತ್ರ ಕಡಿಮೆ ಆಗಿಲ್ಲ. ನಗರದ ಪ್ರಮುಖ ಚಿನ್ನದ ಅಂಗಡಿಗಳಲ್ಲಿ ಜನದಂಗಳಿಯೇ ಏರ್ಪಟ್ಟಿತ್ತು.
ಚಿನ್ನದ ರೇಟ್ ಜಾಸ್ತಿ ಇದ್ದರು, ಜನ ತಮ್ಮ ಸಂಪ್ರದಾಯ ಬಿಡಬಾರದೆಂದು ಚಿನ್ನ ಖರೀದಿ ಮಾಡ್ತಿದ್ದಾರೆ, 10 ಗ್ರಾಂ ಚಿನ್ನ ಕೊಳ್ಳುವವರು 2 ಗ್ರಾಂ ಅಥವಾ ಒಂದು ಗ್ರಾಂ ಚಿನ್ನದ ನಾಣ್ಯ ಆದರೂ ತಗೊಂಡು ಹೋಗ್ತಾ ಇದ್ದಾರೆ ಅಂತಿದ್ದಾರೆ ಚಿನ್ನದ ವ್ಯಾಪಾರಿಗಳು. ಇನ್ನು ಮೊದಲಿನಿಂದಲೂ ನಮ್ಮ ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಒಳ್ಳೆಯದು, ಹಾಗಾಗಿ ನಾವು ಪ್ರತಿ ವರ್ಷ ಚಿನ್ನ ಖರೀದಿ ಮಾಡೋದನ್ನು ಮಿಸ್ ಮಾಡೋದೇ ಇಲ್ಲ ಅಂತಾ ಚಿನ್ನ ಖರೀದಿಸಲು ಬಂದ ಗ್ರಾಹಕರು ಸಂತಸ ವ್ಯಕ್ತಪಡಿಸಿದರು.
ಬೆಲೆ ಏರಿಕೆ ನಡುವೆಯೂ ಸಂಪ್ರದಾಯವನ್ನು ಬಿಡದ ತುಮಕೂರಿಗರೂ. ಬೆಳಗ್ಗೆಯಿಂದಲೂ ಚಿನ್ನದ ಅಂಗಡಿಗಳತ್ತ ಮುಖ ಮಾಡಿ ತಮ್ಮ ಕೈಲಾದ ಚಿನ್ನವನ್ನು ಖರೀದಿಸಿ, ಮನೆಯಲ್ಲಿ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.