ತುಮಕೂರು : ತುಮಕೂರಿನಲ್ಲಿ ಜೆಸಿಬಿ ಘರ್ಜನೆ | ನೋಟಿಸ್ ಕೊಡದೇ ಡೆಮಾಲಿಷ್

ತುಮಕೂರು : ತುಮಕೂರಿನಲ್ಲಿ ಜೆಸಿಬಿಗಳು ಸೌಂಡ್‌ ಮಾಡಿದ್ದು, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪಾಲಿಕೆ ಜೆಸಿಬಿ ಮೂಲಕ ಡೆಮಾಲಿಷ್‌ ಮಾಡಿದೆ. ಶೆಡ್‌ ಡೆಮಾಲಿಷ್‌ ಮಾಡ್ತಾ ಇದ್ದರೆ ಭೂಮಿ ನಮ್ಮದು ನಮಗೆ ನೋಟಿಸ್‌ ಕೊಡದೇ ಏಕಾಏಕಿ ಡೆಮಾಲಿಷ್‌ ಮಾಡ್ತಾ ಇದ್ದಾರೆ, ಅಂತಾ ಭೂ ಮಾಲೀಕರು ಆಕ್ರೋಶ ಹೊರಹಾಕ್ತಾ ಇದ್ದಾರೆ. 

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಮರಳೂರು ಮುಖ್ಯ ರಸ್ತೆಯ ಬಳಿ ಇರೋ ಜಾಗದಲ್ಲಿ ರಾಮಚಂದ್ರ ಹಾಗೂ ಸುಧೀರ್‌ ಅವರ ಕುಟುಂಬ ಶೆಡ್‌ ಮಾಡಿಕೊಂಡು, ಅಂಗಡಿ ನಡೆಸಿ ಜೀವನ ನಡೆಸ್ತಾ ಇದ್ದರಂತೆ, ಆದರೆ ಏಕಾಏಕಿ ಪಾಲಿಕೆ ಅಧಿಕಾರಿಗಳು ಬಂದು ಪೊಲೀಸರ ಸಮ್ಮುಖದಲ್ಲಿ ಜೆಸಿಬಿ ಮೂಲಕ ಶೆಡ್‌ಗಳನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಈ ಜಾಗ ನಮ್ಮ ಅತ್ತೆ- ಮಾವನಿಗೆ ಸೇರಿರೋ ಜಾಗ, ಅವರ ಹೆಸರಲ್ಲೇ ಇದೆ. ಈ ಜಾಗದಲ್ಲಿ ಸುಮಾರು 40 ವರ್ಷಗಳಿಂದ ಅಂಗಡಿ ಹಾಕಿಕೊಂಡು ಜೀವನ ಮಾಡ್ತಿದ್ದೀವೆ. ಆದರೆ ಏಕಾಏಕಿ ತೆರವು ಮಾಡಿದ್ದು ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಅಜ್ಜಿ ಗೋಳಾಡಿದ್ದಾರೆ.

ಇನ್ನು ಈ ಜಾಗದ ಮೇಲೆ ಮೋಹನ್‌ ಲಾಲ್‌ ಹಾಗೂ ಮದನ್‌ ಲಾಲ್‌ ಎಂಬುವವರ ಕಣ್ಣುಬಿದ್ದಿದ್ದು. ಈ ಜಾಗಕ್ಕೆ ಸಂಬಂಧಿಸಿದಂತೆ ನಕಲಿ ಖಾತೆ ಮಾಡಿಸಿಕೊಂಡಿದ್ದಾರೆ. ನಾವು ಯಾವಾಗ ಈ ಜಾಗ ಬಿಡುವುದಿಲ್ಲ ಅಂತಾ ಹಠ ಮಾಡಿದ್ವಿ. ಅಲ್ಲದೇ ಈ ಬಗ್ಗೆ ಡಿವೈಎಸ್‌ಪಿ ಹತ್ತಿರನೂ ಹೋಗಿದ್ದೇವು ಅಲ್ಲೂ ಕೂಡ ಮೋಹನ್‌ ಲಾಲ್‌, ಮದನ್‌ ಲಾಲ್‌ ಅವರು ಬಂದು ಆ ಜಾಗವನ್ನು ಪಡೆಯಲು ಊರಿನವರ ಜೊತೆ ಸೇರಿ ಮಸಲತ್ತು ಮಾಡ್ತಾ ಇದ್ದಾರೆ. ಅಲ್ಲದೇ ಈ ಬಗ್ಗೆ ನಾವು ಕೋರ್ಟಿನಲ್ಲಿ ಸ್ಟೇ ತಂದಿದ್ದರೂ ಕೂಡ  ಏಕಾ ಏಕಿ ನೋಟಿಸ್‌ ಕೊಡದೇ ಪಾಲಿಕೆ ಡೆಮಾಲಿಷ್‌ ಮಾಡಿದ್ದಾರೆ ಅಂತಾ ರಾಮಚಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಏರಿಯಾ ಕಾರ್ಪೊರೇಟರ್‌ ಅವರಿಂದ ಹಿಡಿದು ಅಧಿಕಾರಿಗಳಿಗೆ ಮದನ್‌ ಲಾಲ್‌ ಹಾಗೂ ಮೋಹನ್‌ ಲಾಲ್‌ ಎಂಬುವವರು ದುಡ್ಡು ಕೊಟ್ಟು ಈ ರೀತಿ ಮಾಡಿಸ್ತಾ ಇದ್ದಾರೆ. 5 ಅಡಿ ಜಾಗ ಸರ್ಕಾರದ್ದು ಆದರೆ, ಅದನ್ನು ನಾವು ಬಿಟ್ಟು ಕೊಡ್ತೀವಿ, ಆದರೆ ನಮ್ಮ ಜಾಗವನ್ನು ಪಾಲಿಕೆ ತಮ್ಮದು ಅಂತಾ ಹೇಳಿಕೊಂಡು, ಕಡೆ ಪಕ್ಷ ನೋಟಿಸ್‌ ಕೂಡ ಕೊಡದೇ ಡೆಮಾಲಿಷ್‌ ಮಾಡ್ತಾ ಇದೆ. ನಮಗೆ ನ್ಯಾಯ ಬೇಕು ಅಂತಾ ಸುಧೀರ್‌ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದರು.

ಇತ್ತ ಪಾಲಿಕೆ ಈ ಜಾಗ ಸರ್ಕಾರಿ ಜಮೀನು ಆಗಿದ್ದು ಅನಧಿಕೃತವಾಗಿ ಆಕ್ರಮಣ ಮಾಡಿಕೊಂಡು ಶೆಡ್‌ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಬಂದ ಬಳಿಕ ನಾವು ಡೆಮಾಲಿಷ್‌ ಮಾಡಿದ್ದೇವೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳ್ತಾ ಇದ್ದಾರೆ. ಅದೇನೆ ಆಗಲಿ ಪಾಲಿಕೆ ನೋಡಿದ್ರೆ ಇದು ಪಾಲಿಕೆಗೆ ಸೇರಿರೋ ಜಾಗ ಅಂತಾ ಹೇಳ್ತಾ ಇದ್ರೆ ಇತ್ತ ಜಾಗದ ವಾರಸುದಾರರು ಇದು ನಮಗೆ ಸೇರಿದ್ದು ನೋಟಿಸ್‌ ಕೊಡದೇ ಡೆಮಾಲಿಷ್‌ ಮಾಡ್ತಾ ಇದೆ ಅಂತಾ ಪ್ರತ್ಯಾರೋಪ ಮಾಡ್ತಿದ್ದಾರೆ. ಜಾಗದ ವಿಚಾರವಾಗಿ ಆರೋಪ ಪ್ರತ್ಯಾರೋಪಗಳು ಎದ್ದಿದ್ದು ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಈ ಆಸ್ತಿ ಯಾರಿಗೆ ಸೇರಿದ್ದು ಅಂತಾ ಖಾತರಿ ಮಾಡಿಕೊಂಡು ಬಡವರಿಗೆ ನ್ಯಾಯ ಕೊಡಿಸಬೇಕಿದೆ.

Author:

...
Sushmitha N

Copy Editor

prajashakthi tv

share
No Reviews