ಬೆಂಗಳೂರು:
ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್‌ಶೋಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಇಂದಿನಿಂದ ಫೆಬ್ರವರಿ 14ರವರೆಗೂ ಏರ್ ಶೋ ನಡೆಯಲಿದೆ. ಏರ್‌ಶೋ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು. ಈ ಬಾರಿ ಏರ್ ಶೋ ನಲ್ಲಿ ಸುಮಾರು 100 ದೇಶಗಳು ಭಾಗಿಯಾಗಿದ್ದು, 27 ದೇಶಗಳ ರಕ್ಷಣಾ ಸಚಿವರು ಏರ್ ಶೋಗೆ ಸಾಕ್ಷಿಯಾಗಿದ್ದಾರೆ. ಇನ್ನು ಏರ್ ಶೋ ನೋಡಲು ಜನರಂಥೂ ಮುಗಿ ಬೀಳ್ತಾ ಇದ್ದು, ಸಾವಿರಾರು ಏರ್ ಶೋವನ್ನು ಕಣ್ತುಂಬಿಕೊಂಡಿದ್ದಾರೆ. ಆಗಸದಲ್ಲಿ ಘರ್ಷಿಸುತ್ತಿರೋ ಲೋಹದ ಹಕ್ಕಿಗಳನ್ನು ಕಂಡು ಜನರು ನಿಬ್ಬೆರಗಾದರು.
ಏರ್ ಶೋನಲ್ಲಿ ಆತ್ಮನಿರ್ಭರ ಯೋಜನೆಯಡಿ ಭಾರತದಲ್ಲೇ ನಿರ್ಮಾಣವಾದ ಹಲವಾರು ಯುದ್ಧ ವಿಮಾನಗಳು ಪ್ರದರ್ಶನ ಮಾಡ್ತಾ ಇದ್ದು, ಸೂರ್ಯ ಕಿರಣ್, ಸಾರಂಗ್, ಸುಖೋಯ್ ಪ್ರದರ್ಶನಕ್ಕೆ ಜನರು ಜೈಕಾರ ಹಾಕಿದ್ದಾರೆ. ಇನ್ನು ಏರ್ ಶೋನಲ್ಲಿ ತುಮಕೂರಿನ ಎಚ್‌ಎಎಲ್‌ನಲ್ಲಿ ತಯಾರಾದ ಹೆಲಿಕಾಫ್ಟರ್ ಕಮಾಲ್ ಮಾಡಿದೆ. ಹೌದು ಮೇಡ್ ಇನ್ ಇಂಡಿಯಾ ನಿರ್ಮಿತ LUH ಹೆಲಿಕಾಫ್ಟರ್ ಏರ್ ಶೋನಲ್ಲಿ ಪೈಟ್ ವೈಟ್ ಹೆಲಿಕಾಫ್ಟರ್ ಗಳ ಹಾರಾಟ ನಡೆಸಿದ್ದು, ಎಲ್ಲರ ಗಮನವನ್ನು ಸೆಳೆದಿದೆ.
ಇನ್ನು ಈ ಹೆಲಿಕಾಫ್ಟರ್‌ನ ವಿಶೇಷ ಅಂದರೆ ಹೆಲಿಕಾಫ್ಟರ್‌ಗೆ ಬೇಕಾದ ಒಂದೇ ಒಂದು ಬಿಡಿ ಭಾಗವನ್ನು ಕೂಡ ಹೊರಗಡೆಯಿಂದ ತಂದಿಲ್ಲ, ಎಲ್ಲವನ್ನು ಗುಬ್ಬಿಯಲ್ಲಿರೋ ಎಚ್‌ಎಎಲ್‌ನಲ್ಲಿ ತಯಾರು ಮಾಡಿದ್ದು, ಸಂಪೂರ್ಣ ಸ್ವದೇಶಿ ಹೆಲಿಕಾಫ್ಟರ್ ಆಗಿದೆ. ಇದೀಗ ಏರ್ ಶೋ ನಲ್ಲಿ ಈ ಹೆಲಿಕಾಫ್ಟರ್ ಪ್ರದರ್ಶನ ಮಾಡಿದ್ದು, ಆಗಸದಲ್ಲಿ ತುಮಕೂರಿನಲ್ಲಿ ನಿರ್ಮಾಣವಾದ ಹೆಲಿಕಾಫ್ಟರ್ ಮಾಡಿದ ಸಾಹಸಕ್ಕೆ ಜನರು ಮನಸೋತರು. ಸದ್ಯ HAL ನಲ್ಲಿ ತಯಾರಿಸಿದ ಹೆಲಿಕಾಫ್ಟರ್‌ಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸುಮಾರು 12 ಹೆಲಿಕಾಫ್ಟರ್‌ಗಳಿಗೆ ಕೇಂದ್ರ ಸರ್ಕಾರ ಡಿಮ್ಯಾಂಡ್ ಇಟ್ಟಿರುವ ಬಗ್ಗೆ ಮಾಹಿತಿ ಹೊರಬಿದಿದ್ದೆ, ಹೌದು ಆರ್ಮಿ ವಿಭಾಗಕ್ಕೆ 6 ರಕ್ಷಣಾ ಇಲಾಖೆಗೆ 6 ಹೆಲಿಕಾಫ್ಟರ್‌ಗಳನ್ನು ತಯಾರಿ ಮಾಡಿ ಕೊಡುವಂತೆ ಕೇಂದ್ರ ಸರ್ಕಾರ ಬೇಡಿಕೆ ಇಟ್ಟಿದೆಯಂತೆ.
ಒಟ್ಟಿನಲ್ಲಿ ಏರ್ ಶೋದಲ್ಲಿ ನಮ್ಮ ತುಮಕೂರಿನಲ್ಲಿ ತಯಾರಾದ ಹೆಲಿಕಾಫ್ಟರ್ ಆಗಸದಲ್ಲಿ ಮೋಡಿ ಮಾಡಿ, ಜನರನ್ನು ಹಾಗೂ ಸರ್ಕಾರವನ್ನು ಗಮನ ಸೆಳೆಯುವಂತೆ ಮಾಡಿದ್ದು ತುಮಕೂರಿಗೆ ಹೆಮ್ಮೆಯ ಸಂಗತಿಯಾಗಿದೆ. ತುಮಕೂರಿನ ಪವರ್ ಇದೀಗ ಕೇಂದ್ರ ಸರ್ಕಾರಕ್ಕೂ ತೋರಿಸಿಕೊಟ್ಟಂತಾಗಿದೆ.