ತುಮಕೂರು :
ತುಮಕೂರು ಜಿಲ್ಲಾಸ್ಪತ್ರೆಯ ಕರ್ಮಕಾಂಡ ಒಂದಾ.. ಎರಡಾ..? ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡುವುದಿರಲಿ ಸ್ವಚ್ಛತೆ ಅಂದರೆ ಏನು ಅನ್ನೋದು ಆಸ್ಪತ್ರೆಯ ಸಿಬ್ಬಂದಿಗೆ ಗೊತ್ತೇ ಇಲ್ಲ ಅಂತಾ ಕಾಣುತ್ತೆ. ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಮಾಡಿ, ವೈದ್ಯಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ನೋ ಯೂಸ್.. ನೋಡಿ ಸ್ವಾಮಿ ನಾವು ಇರೋದೆ ಹೀಗೆ ಅಂತಾ ಸಾಬೀತುಪಡಿಸ್ತಾನೆ ಇದ್ದಾರೆ. ಆರೋಗ್ಯ ಸರಿಮಾಡಿಸಿಕೊಳ್ಳಲು ಬಂದವರು ರೋಗವನ್ನು ಹತ್ತಿಸಿಕೊಂಡೇ ಮನೆಯ ದಾರಿ ಹಿಡಿಯುವಂತಹ ಕೆಟ್ಟ ಪರಿಸ್ಥಿತಿ ಇದೆ. ಸಮಸ್ಯೆಗಳು ತಾಂಡವ ಆಡ್ತಾ ಇದ್ರು ಕೂಡ ವೈದ್ಯಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿರೋ ಯುಜಿಡಿ ಕಟ್ಟಿಕೊಂಡು ಗಲೀಜು ನೀರು ಹರಿದು ಬರ್ತಾ ಇದ್ದು, ಗಬ್ಬು ವಾಸನೆ ಬೀರುತ್ತಿದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಮೂಗು ಮುಚ್ಚಿಕೊಂಡೆ ಓಡಾಡಬೇಕಾದ ಸ್ಥಿತಿ ಇದೆ. ಬ್ಲಡ್ ಟೆಸ್ಟಿಂಗ್ ಬಳಿ ಇರೋ ಯುಜಿಡಿ ಕಟ್ಟಿಕೊಂಡು ವಾರ ಕಳೆದರೂ ಕೂಡ ಅಧಿಕಾರಿಗಳು ಕ್ಲೀನಿಂಗ್ ಮಾಡಿಸುವ ಕೆಲಸಕ್ಕೆ ಮಾತ್ರ ಮುಂದಾಗ್ತಾ ಇಲ್ಲ. ಇದರಿಂದ ಬ್ಲಡ್ ಟೆಸ್ಟಿಂಗ್‌ಗೆ ಬರುವ ರೋಗಿಗಳು ದುರ್ನಾತ ಬೀರುವ ವಾಸನೆಯನ್ನು ತಡೆದುಕೊಂಡೇ ಹೋಗಬೇಕಿದೆ.
ಆಸ್ಪತ್ರೆ ಸಮೀಪದಲ್ಲೇ ಜ್ಯೂಸ್ ಸೆಂಟರ್, ನಂದಿನಿ ಬೂತ್ ಹಾಗೂ ಹಲವು ಅಂಗಡಿಗಳಿದ್ದು, ಊಟ, ಜ್ಯೂಸ್, ಟೀ ಕುಡಿಯಲು ಬರುವ ರೋಗಿಗಳ ಸಂಬಂಧಿಕರು ಗಬ್ಬು ವಾಸನೆಯಲ್ಲೇ ಸೇವಿಸುವ ಹೀನಾಯ ಸ್ಥಿತಿ ಇದೆ. ಕಟ್ಟಿಕೊಂಡ ಯುಜಿಡಿಯನ್ನು ಸರಿಪಡಿಸಲು ಇನ್ನು ಎಷ್ಟು ದಿನ ಬೇಕು. ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕ್ತಾ ಇದ್ದಾರೆ.
ಮೂರು ತಿಂಗಳು ಬಿಟ್ಟು ಬನ್ನಿ ಆಸ್ಪತ್ರೆಯನ್ನು ಉನ್ನತ ಮಟ್ಟಕ್ಕೆ ತಂದಿರುತ್ತೀವಿ ಅಂತಾ ಹೇಳೋ ಡಿಎಸ್ ಸಾಹೆಬರು ಯಾಕೋ ಅವರ ಮಾತನ್ನು ಮರೆತಂತೆ ಕಾಣಿಸ್ತಾ ಇದೆ. ಡಿಎಸ್ ಹೇಳಿ ಸುಮಾರು ಎರಡು ತಿಂಗಳು ಕಳೆದು ಮೂರು ತಿಂಗಳಿಗೆ ಕಾಲಿಟ್ಟಿದ್ದು ಜಿಲ್ಲಾಸ್ಪತ್ರೆಯಲ್ಲಿ ಅಸ್ವಚ್ಛತೆ ಎಂಬುದು ತಾಂಡವ ಆಡ್ತಾನೆ ಇದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟಿಕೊಂಡಿರೋ ಯುಜಿಡಿಯನ್ನು ಸರಿಪಡಿಸಿ ರೋಗಿಗಳನ್ನು ಪ್ರಾಣಪಾಯದಿಂದ ಪಾರು ಮಾಡಬೇಕಿದೆ. ಮುಂದೆ ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉತ್ತಮ ಸೇವೆ ನೀಡ್ತಾರಾ ಎಂದು ಕಾದುನೋಡಬೇಕಿದೆ.