ತುಮಕೂರು : SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತುಮಕೂರಿನ ಇಬ್ಬರು ವಿದ್ಯಾರ್ಥಿಗಳು

ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು
ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು
ಜಿಲ್ಲೆ

ತುಮಕೂರು :

ಕಳೆದ ಮಾರ್ಚ್‌, ಏಪ್ರಿಲ್‌ನಲ್ಲಿ ನಡೆದಿದ್ದ 10 ನೇ ತರಗತಿ ಪರೀಕ್ಷಾ ಫಲಿತಾಂಶ ಇಂದು ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಸಿಕ್ಕರೆ, ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನು ಫಲಿತಾಂಶದಲ್ಲಿ ಕಲಬುರಗಿ ಕೊನೆಯ ಸ್ಥಾನವನ್ನು ಗಳಿಸಿದೆ. ಶೈಕ್ಷಣಿಕ ನಗರಿ ಎಂದೇ ಖ್ಯಾತಿ ಪಡೆದಿರುವ ತುಮಕೂರು ಜಿಲ್ಲೆ 20ನೇ ಸ್ಥಾನಕ್ಕೆ ಕುಸಿದಿದೆ, ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 16ನೇ ಸ್ಥಾನದಲ್ಲಿದ್ದ ತುಮಕೂರು ಜಿಲ್ಲೆ ಈ ಬಾರಿ ಶೇ 67.03 ಫಲಿತಾಂಶಗಳಿಸಿ 20ನೇ ಸ್ಥಾನಕ್ಕೆ ಕುಸಿದಿರುವುದು ಬೇಸರದ ಸಂಗತಿಯಾಗಿದೆ.

SSLC ಪರೀಕ್ಷೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನಗಳಿಸಿದ್ದಾರೆ. ಅದರಲ್ಲಿ ತುಮಕೂರಿನ ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಟಾಪರ್‌ ಆಗಿದ್ದಾರೆ. ತುಮಕೂರಿನ ಚೇತನಾ ವಿದ್ಯಾಮಂದಿರದ  ಮಹಮದ್ ಮಸ್ತೂರ್ ಅದಿಲ್ ವಿದ್ಯಾರ್ಥಿ 625ಕ್ಕೆ 625 ಅಂಕಗಳನ್ನು ಪಡೆದು 8ನೇ ರ‍್ಯಾಂಕ್‌  ಪಡೆದಿದ್ದರೆ, ಮಧುಗಿರಿ ತಾಲೂಕಿನ ಚಿರಾಕ್ ಪಬ್ಲಿಕ್‌ ಶಾಲೆಯ ಯಶ್ವಿತಾ ರೆಡ್ಡಿ ಎಂಬ ವಿದ್ಯಾರ್ಥಿನಿ ಔಟ್‌ ಆಫ್‌ ಔಟ್‌ ಪಡೆದು 21ನೇ ರ‍್ಯಾಂಕ್‌ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ತುಮಕೂರು ಜಿಲ್ಲೆಯ SSLC ಫಲಿತಾಂಶ ಕಳೆದ ಬಾರಿಗಿಂತ ಕಡಿಮೆ ಅಗಿದ್ದು, 16ನೇ ಸ್ಥಾನದಿಂದ 20ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಒಟ್ಟು 20 ಸಾವಿರದ 452 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 13 ಸಾವಿರದ 709 ಮಂದಿ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಈ ಮೂಲಕ ಜಿಲ್ಲೆಗೆ ಶೇಕಡಾ 67.03 ರಷ್ಟು ಫಲಿತಾಂಶ ಸಿಕ್ಕಿದ್ದು 20ನೇ ಸ್ಥಾನಕ್ಕೆ ಫಲಿತಾಂಶ ಕುಸಿದಿದೆ. ಇನ್ನು ಚೇತನಾ ವಿದ್ಯಾಮಂದಿರದ ಮಹಮದ್ ಮಸ್ತೂರ್ ಅದಿಲ್ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು  ವಿದ್ಯಾರ್ಥಿಗೆ ಸನ್ಮಾನ ಮಾಡಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು. ಇತ್ತ ಮಗನ ಸಾಧನೆಗೆ ಪೋಷಕರು ಸಂತಸಗೊಂಡು ಭಾವುಕರಾದರು. ಈ ವೇಳೆ ಮಾತನಾಡಿದ ಟಾಪರ್‌ ವಿದ್ಯಾರ್ಥಿ ಮಹಮದ್ ಮಸ್ತೂರ್ ಅದಿಲ್, 620 ಅಂಕ ಬರುವ ನಿರೀಕ್ಷೆ ಇತ್ತು. ಆದರೆ 625 ಅಂಕ ಬಂದಿದ್ದು ಖುಷಿಯಾಗಿದೆ. ಈ ಯಶಸ್ಸಿಗೆ ನಮ್ಮ ಪೇರೆಂಟ್ಸ್‌ ಹಾಗೂ ಟೀಚರ್ಸ್‌ ಸಪೋರ್ಟ್‌ ಕಾರಣ ಅಂತಾ ವಿದ್ಯಾರ್ಥಿ ಸಂತಸ ವ್ಯಕ್ತಪಡಿಸಿದರು.

ಇನ್ನು ಚೇತನಾ ವಿದ್ಯಾಮಂದಿರದ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್‌ ಆಗಿದ್ದಕ್ಕೆ ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವೃಂದ ಸಂತಸ ವ್ಯಕ್ತಪಡಿಸಿದ್ದು, ಮಹಮದ್‌ ಮಸ್ತೂರ್‌ ಆದಿಲ್‌ ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದು, ವಿದ್ಯಾರ್ಥಿ ಹೇಗೆಲ್ಲಾ ಪರೀಕ್ಷಾ ತಯಾರಿಯನ್ನು ಮಾಡಿಕೊಳ್ತಾ ಇದ್ದ ಅಂತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬರದ ನಾಡು ಅಂತಾಲೇ ಫೇಮಸ್‌ ಆಗಿರೋ ಮಧುಗಿರಿ ತಾಲೂಕಿನ ಚಿರಾಕ್ ಪಬ್ಲಿಕ್‌ ಶಾಲೆಯ ಯಶ್ವಿತಾ ರೆಡ್ಡಿ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 21 ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೇ ಮಧುಗಿರಿ, ಶಿರಾ, ಪಾವಗಡ, ಕೊರಟಗೆರೆ ತಾಲೂಕುಗಳಿಗೆ ಟಾಪರ್‌ ಆಗಿ ಹೊರ ಹೊಮ್ಮಿದ್ದ ಯಶ್ವಿತ ರೆಡ್ಡಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಕೇಕ್‌ ಕತ್ತರಿಸಿ, ವಿದ್ಯಾರ್ಥಿನಿಗೆ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಯಾವುದೇ ಟ್ಯೂಷನ್‌ಗೆ ಹೋಗದೇ ಮನೆಯಲ್ಲಿ ಕೂತು ಓದುತ್ತಾ ಇದ್ದೆ. ಸ್ಕೂಲ್‌ನಲ್ಲಿದ್ದ ಟೀಚರ್ಸ್‌‌ ಹಾಗೂ ಪೋಷಕರ ಸಪೋರ್ಟ್‌ನಿಂದ ಈ ರ್ಯಾಂಕ್‌ ಪಡೆಯಲು ಸಾಧ್ಯ ಆಯ್ತು. ಅಂತಾ ವಿದ್ಯಾರ್ಥಿನಿ ಯಶ್ವಿತಾ ರೆಡ್ಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಇನ್ನು ತಮ್ಮ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್‌ ಆಗಿದ್ದಕ್ಕೆ ಶಾಲಾ ಹೆಡ್‌ಮಾಸ್ಟರ್‌ ಹಾಗೂ ಪೋಷಕರು ಸಂತಸವನ್ನು ವ್ಯಕ್ತಪಡಿಸಿದರು. ಶೈಕ್ಷಣಿಕ ನಗರಿ ಅಂತಾ ಹೆಸರುವಾಸಿಯಾಗಿರೋ ತುಮಕೂರು ಜಿಲ್ಲೆಯ SSLC ಪರೀಕ್ಷಾ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಕಡಿಮೆ ಫಲಿತಾಂಶ ಸಿಕ್ಕಿದೆ. 16 ನೇ ಸ್ಥಾನದಲ್ಲಿದ್ದ ತುಮಕೂರು ಜಿಲ್ಲೆ 20ನೇ ಸ್ಥಾನಕ್ಕೆ ಕುಸಿದಿದ್ದು ಈ ಬಗ್ಗೆ ತುಮಕೂರು ಜಿಲ್ಲಾ ಶಿಕ್ಷಣ ಇಲಾಖೆ ಗಮನ ಹರಿಸಬೇಕಿದೆ. ಮುಂದಿನ ದಿನಗಳಲ್ಲಿ ಆದರೂ ಜಿಲ್ಲೆಯ ಫಲಿತಾಂಶ ಹೆಚ್ಚಾಗುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಹೆಚ್ಚಿನ ಶ್ರಮವಹಿಸಬೇಕಿದೆ.

 

Author:

...
Sushmitha N

Copy Editor

prajashakthi tv

share
No Reviews