CRICKET :
ಇಂದು ಕೊಲ್ಕತ್ತ ನೈಟ್ ರೈಡರ್ಸ್ ತಂಡ ಇಂದು ಡಬಲ್ ಹೆಡರ್ ಮೊದಲ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹೆದ್ರಿಸಲು ಸಜ್ಜಾಗಿದೆ. ಇನ್ನು ಕೆಕೆಆರ್ ಗೆ ಕೇವೆಲ 4 ಪಂದ್ಯಗಳು ಮಾತ್ರ ಉಳಿದಿವೆ.
ಇದರಲ್ಲಿ ಕೆಕೆಆರ್ ಗೆದ್ದು 17 ಅಂಕ ಪಡೆದ್ರೆ ಮಾತ್ರ ಪ್ಲೇ ಆಫ್ ಗೆ ಹೋಗಬಹುದು. ಇತ್ತ ಸತತ ಸೋಲಿನಿಂದ ಕಂಗೆಟ್ಟಿರೋ ಪ್ಲೇ ಆಫ್ ನಿಂದ ಹೊರಬಿದ್ದಿರೋ ರಾಜಸ್ಥಾನ್ ರಾಯಲ್ಸ್ಗೆ ಇದು ಮರ್ಯಾದೆಯ ಪ್ರಶ್ನೆಯಾಗಿದೆ.
ಈಡನ್ ಗಾರ್ಡನ್ಸ್ ಮೈದಾನದ ಪಿಚ್ ಕೆಕೆಆರ್ಗೆ ಗುಡ್ಲಕ್ ಕೊಡೊಲ್ಲ. ಇಲ್ಲಿ ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಕೆಕೆಆರ್ ಉಳಿದಿರುವ 4 ಪಂದ್ಯಗಳ ಪೈಕಿ2 ಪಂದ್ಯಗಳು ಇದೇ ಪಿಚ್ ನಲ್ಲಿ ನಡೆಯೋದ್ರಿಂದ ಕೆಕೆಆರ್ ಗೆ ತಲೆ ನೋವಾಗಿದೆ ಎನ್ನಬಹುದು.