ತುರುವೇಕೆರೆ : ಬೈಕ್ ನಲ್ಲಿದ್ದ ಹಣವನ್ನು ನೋಡ ನೋಡ್ತಾ ಇದ್ದಂತೆ ಎಗರಿಸಿದ ಐನಾತಿ ಕಳ್ಳ..

ಸಿಸಿ ಕ್ಯಾಮರಾ ದೃಶ್ಯ
ಸಿಸಿ ಕ್ಯಾಮರಾ ದೃಶ್ಯ
ತುಮಕೂರು

ತುರುವೇಕೆರೆ:

ಬೈಕ್‌ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ನೋಡ್ತಾ ನೋಡ್ತಾ ಇದ್ದಂತೆ ಎಗರಿಸಿ ಐನಾತಿ ಕಳ್ಳನೊಬ್ಬ ಎಸ್ಕೇಪ್‌ ಆಗಿದ್ದಾನೆ. ಈ ಘಟನೆಯು ತುರುವೇಕೆರೆ ಪಟ್ಟಣದ ಬಾಣಸಂದ್ರ ರಸ್ತೆಯ ಭಾರತ್‌ ಪೆಟ್ರೋಲ್‌ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಕೊಳ್ಳಘಟ್ಟ ಗ್ರಾಮದ ವಿಶ್ವನಾಥ್‌ ಹಣ ಕಳೆದುಕೊಂಡ ನತದೃಷ್ಟನಾಗಿದ್ದಾನೆ.

ವಿಶ್ವನಾಥ್‌ ಚಿನ್ನದ ಒಡವೆಗಳನ್ನು ಅಡವಿಟ್ಟು ಎರಡು ಲಕ್ಷದ 90 ಸಾವಿರ ರೂಪಾಯಿಗಳನ್ನು ಪಡೆದುಕೊಂಡು ತಮ್ಮ ಬೈಕಿನ ಬಾಕ್ಸ್ ನಲ್ಲಿ ಇಟ್ಟುಕೊಂಡಿದ್ದರು. ಹಣ ತೆಗೆದುಕೊಂಡು ಮನೆಗೆ ಹೋಗುವ ವೇಳೆ ಮಾರ್ಗ ಮಧ್ಯೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಭಾರತ್‌ ಪೆಟ್ರೋಲ್‌ ಬಂಕ್‌ಗೆ ತೆರಳಿದ್ದರು. ಪೆಟ್ರೋಲ್‌ ಹಾಕಿಸಿಕೊಂಡು ತದನಂತರ ಬೈಕನ್ನು ಸ್ವಲ್ಪ ಮುಂದೆ ನಿಲ್ಲಿಸಿ ತಾವು ತಂದಿದ್ದ ಕ್ಯಾನಿಗೆ ಡೀಸೆಲ್ ತುಂಬಿಸಿಕೊಳ್ಳಲು ಹೋಗಿದ್ದರು. ಅಷ್ಟರಲ್ಲಿ ಬಂದ ಐನಾತಿ ಕಳ್ಳ ಬೈಕ್‌ನಲ್ಲಿ ಇದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾನೆ.

ಈ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪೆಟ್ರೋಲ್ ಬಂಕ್ ನಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಗಿ ಕಳ್ಳತನ ಮಾಡಿದ ಆರೋಪಿಯ ಬೈಕ್ ನಂಬರ್ ಪತ್ತೆಯಾಗಿದೆ. ಆರೋಪಿಯ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

Author:

share
No Reviews