ತುಮಕೂರು : ತುಮಕೂರಿನಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆಗೆ ಮೊನ್ನೆ ರಾತ್ರಿ ಭಾರಿ ಮಳೆಯಗಿದ್ದು ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದವು. ನಗರದ ಕುಣಿಗಲ್ ರೋಡ್ ನಲ್ಲಿರುವ ಸಂಚಾರಿ ಪೊಲೀಸ್ ಠಾಣೆ ಹಾಗೂ ಸೈಬರ್ ಆರ್ಥಿಕ ಹಾಗೂ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಗೆ ಹೋಗುವ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟಿತ್ತು. ಇದ್ರಿಂದ ಪೊಲೀಸರು ಹಾಗೂ ಸಾರ್ವಜನಿಕರು ಓಡಾಡಲು ಕಷ್ಟಪಡುವಂತಾಯ್ತು.
ಈ ಮೊದಲೇ ಸಂಚಾರಿ ಪೊಲೀಸ್ ಠಾಣೆಗೆ ಹೋಗುವ ರಸ್ತೆ ಹಾಳಾಗಿಯೇ ಇತ್ತು. ಆ ರಸ್ತೆಗೆ ಟಾರ್ ಭಾಗ್ಯ ಕೂಡ ಇಲ್ಲ. ಗುಂಡಿಗಳಿಂದ ಕೂಡಿದ್ದು ಮಳೆ ಬಂತೆದ್ರೆ ಗುಂಡಿಗಳಲ್ಲಿ ನೀರು ತುಂಬಿಕೊಳ್ತಾ ಇರೋದ್ರಿಂದ ಸಾರ್ವಜನಿಕರು ಕಾಗೂ ಸವಾರರು ಅಷ್ಟೇ ಯಾಕೆ ಪೊಲೀಸರು ಕೂಡ ಓಡಾಡಲು ಕಷ್ಟವಾಗ್ತಾ ಇತ್ತು. ಇನ್ನು ಕೆಸರು ಗದ್ದೆಯಂತಾದ ಕೊಚ್ಚೆ ರಸ್ತೆಯಲ್ಲಿ ಸಾಹಸ ಮಾಡಿ ಬೈಕ್ ಸವಾರರು ಹಾಗೂ ಪಾದಚಾರಿಗಳು ಸಂಚರಿಸಬೇಕಿದೆ.