ಚಿಕ್ಕಾಬಳ್ಳಾಪುರ : ಪರೇಡ್ ನಲ್ಲಿ ಭಾಗಿಯಾದ ರೌಡಿಗಳನ್ನು ಬೆಂಡೆತ್ತಿದ SP

ಚಿಕ್ಕಬಳ್ಳಾಪುರ ಪೊಲೀಸ್‌ ಗ್ರೌಂಡ್‌ ನಲ್ಲಿ ಎಸ್‌ ಪಿ ಕುಶಾಲ್‌ ಚೌಕ್ಸೆ ನೇತೃತ್ವದಲ್ಲಿ ರೌಡಿ ಶೀಟರ್ ಗಳ ಪರೇಡ್‌ ನಡೆಸಲಾಯಿತು.
ಚಿಕ್ಕಬಳ್ಳಾಪುರ ಪೊಲೀಸ್‌ ಗ್ರೌಂಡ್‌ ನಲ್ಲಿ ಎಸ್‌ ಪಿ ಕುಶಾಲ್‌ ಚೌಕ್ಸೆ ನೇತೃತ್ವದಲ್ಲಿ ರೌಡಿ ಶೀಟರ್ ಗಳ ಪರೇಡ್‌ ನಡೆಸಲಾಯಿತು.
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ :

ಜಿಲ್ಲಾ ತಾಲೂಕು ಪಂಚಾಯಿತಿಯ ಎಲೆಕ್ಷನ್‌ ಹಿನ್ನೆಲೆ ಚಿಕ್ಕಬಳ್ಳಾಪುರ ಪೊಲೀಸ್‌ ಗ್ರೌಂಡ್‌ನಲ್ಲಿ ರೌಡಿಗಳ ಪರೇಡ್‌ ನಡೆಸಲಾಗಿದ್ದು, ರೌಡಿ ಶೀಟರ್‌ಗಳಿಗೆ ಪೊಲೀಸರು ಬೆವರಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್‌ ಚೌಕ್ಸೆ ನೇತೃತ್ವದಲ್ಲಿ ರೌಡಿಶೀಟರ್‌ಗಳ ಪರೇಡ್‌ ನಡೆಸಲಾಯಿತು. ಪರೇಡ್‌ನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಸುಮಾರು 400ಕ್ಕೂ ಅಧಿಕ ರೌಡಿಶೀಟರ್‌ಗಳು ಭಾಗಿಯಾಗಿದ್ದು ವಿಚಾರಣೆ ನಡೆಸಲಾಯಿತು. ಪರೇಡ್ ನಲ್ಲಿ ಎಎಸ್ಪಿ, ಡಿವೈಎಸ್ಪಿ ಸೇರಿದಂತೆ ಸಿಐ, ಪಿಎಸ್ಐ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.

ರೌಡಿಶೀಟರ್‌ಗಳ ಪರೇಡ್‌ ವೇಳೆ ರೌಡಿಗಳಿಗೆ ಎಸ್‌ಪಿ ಕುಶಾಲ್‌ ಚೌಕ್ಸೆ ಸಖತ್‌ ಬೆಂಡೆತ್ತಿದ್ದಾರೆ. ಅಲ್ಲದೇ ರೌಡಿ ಶೀಟರ್‌ಗಳ ಪರೇಡ್‌ ವೇಳೆ ವಾಟ್ಸಾಪ್‌ ನಲ್ಲಿ ಮಟ್ಕಾ ಗ್ರೂಪ್‌, ಗ್ಯಾಬ್ಲಿಂಗ್ ಗ್ರೂಪ್ ಗಳು ಪತ್ತೆಯಾಗಿದ್ದು, ವಿಚಾರಣೆ ವೇಳೆ ಮಟ್ಕಾ ದಂಧೆ ಬಗ್ಗೆ ರೌಡಿಶೀಟರ್‌ಗಳು ಬಾಯಿಬಿಟ್ಟಿದ್ದಾರೆ. ಹೇ ನಿನಗೆ ಬುದ್ದಿ ಇಲ್ವಾ, ಇಷ್ಟು ಕೇಸ್‌ ಬಿದ್ರು ಬುದ್ದಿ ಬಂದಿಲ್ವಾ ಎಂದು ಎಸ್‌ಪಿ ಸಖತ್‌  ಕ್ಲಾಸ್ ತೆಗೆದುಕೊಂಡಿದ್ದರು. ಅಲ್ಲದೇ ಕೇಸ್ ದಾಖಲಿಸಿ ಮಟ್ಕಾ ದಂಧೆ ಮೇಲೆ ರೈಡ್ ಮಾಡುವಂತೆ ಪೊಲೀಸ್‌ ಸಿಬ್ಬಂದಿಗೆ ಎಸ್‌ಪಿ ಸ್ಥಳದಲ್ಲೇ ಸೂಚನೆ ನೀಡಿದ್ದಾರೆ. ಇನ್ನು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಎಲೆಕ್ಷನ್‌ ಹತ್ತಿರ ಬರ್ತಾ ಇದ್ದು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದಂತೆ ರೌಡಿಶೀಟರ್‌ಗಳಿಗೆ ಎಸ್‌ಪಿ ಕುಶಾಲ್‌ ಚೌಕ್ಸೆ ಖಡಕ್‌ ವಾರ್ನಿಂಗ್‌ ಕೊಡಲಾಗಿದೆ.

Author:

...
Editor

ManyaSoft Admin

Ads in Post
share
No Reviews