ಶಿರಾ :
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಬೇಕಾದ್ರೂ ಇರ್ತಾರೆ. ಆದರೆ ಕೆಟ್ಟ ತಾಯಿಯನ್ನು ಎಂದಿಗೂ ಕಂಡಿರಲು ಸಾಧ್ಯವಿಲ್ಲ. ತನ್ನ ಪ್ರಾಣವನ್ನು ಪಣಕ್ಕಿಟ್ಟು ತನ್ನ ಮಗುವನ್ನು ಜೋಪಾನ ಮಾಡುವವಳು ತಾಯಿ. ಎಷ್ಟೇ ಕಷ್ಟ ಬಂದರೂ ತನ್ನ ಮಗುವನ್ನು ಮಾತ್ರ ಜೋಪಾನ ಮಾಡುವವಳು ತಾಯಿಯೊಬ್ಬಳೇ. ತಾಯಿಯ ತ್ಯಾಗವನ್ನು ಎರಡಕ್ಷರದಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ, ಆದರೆ ಇಲ್ಲೊಬ್ಬ ಪಾಪಿ ತಾಯಿ ಒಂಭತ್ತು ತಿಂಗಳು ಹೆತ್ತು ಹೊತ್ತು ಸಾಕಿದ ಹೆಣ್ಣು ಮಗುವನ್ನು ಪೊದೆಯೊಂದರಲ್ಲಿ ಬಿಸಾಕಿ ಹೋಗಿರೋ ಘೋರ ಕೃತ್ಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಮಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಾಪಿ ತಾಯಿಯೊಬ್ಬಳು ಹೆರಿಗೆ ಆದ ಬಳಿಕ ತನಗೆ ಹೆಣ್ಣು ಮಗು ಬೇಡವೆಂದು, ಆಗತಾನೆ ಹುಟ್ಟಿದ ಮಗುವನ್ನು ಬಟ್ಟೆಯಲ್ಲಿ ಸುತ್ತಿ, ಕವರ್‌ನಲ್ಲಿ ಕಟ್ಟಿ ಬೇಲಿಯೊಂದರಲ್ಲಿ ಎಸೆದು ಹೋಗಿದ್ದಾಳೆ. ಮಗು ಚೀರಾಟ ಕಂಡ ಸ್ಥಳೀಯರು ಕವರ್ ಅನ್ನು ಓಪನ್ ಮಾಡಿ ನೋಡಿದರೆ ಹೆಣ್ಣು ಮಗು. ಕೂಡಲೇ ಸ್ಥಳೀಯರು ನವಜಾತ ಹೆಣ್ಣು ಮಗುವಿಗೆ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ಸದ್ಯ ನವಜಾತ ಶಿಶುವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡ್ತಾ ಇದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಾಯಿಗಾಗಿ ಹುಡುಕಾಟ ನಡೆಸಲಾಗ್ತಿದೆ.