ತುಮಕೂರು : ಅಬ್ಬಬ್ಬಾ. ಮಹಾನಗರ ಪಾಲಿಕೆಯ ಅಧಿಕಾರಿಗಳೇ ಯಾಕಿಷ್ಟು ನಿರ್ಲಕ್ಷ್ಯ, ಸೋಂಬೇರಿತನ. ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟಿದೆ ಅನ್ನೋದಕ್ಕೆ ಗಾರ್ಡನ್ ರಸ್ತೆ ಒಂದು ದೊಡ್ಡ ಉದಾಹರಣೆ. ತುಮಕೂರಿನ ಗಾರ್ಡ್ನ ರಸ್ತೆಯಲ್ಲಿರುವ ಯುಜಿಡಿ ಓಪನ್ ಆಗಿ ಹೊರಬರುತ್ತಿರುವ ನೀರಿನಿಂದ ಒಂದು ಕಡೆ ರಸ್ತೆ ಜಲಾವೃತವಾದರೆ, ಮತ್ತೊಂದೆಡೆ ಮನೆಯ ಮುಂದೆ ನಿಲ್ಲುತ್ತಿರುವ ಗಬ್ಬೆದ್ದ ನೀರಿನ ವಾಸನೆ ಕುಡಿದು ಬದುಕುವ ಪರಿಸ್ಥಿತಿ ಜನರದ್ದು, ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಅಲ್ಲಿನ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾತ್ರ ಮಾಡ್ತಾ ಇಲ್ಲ. ಪಾಲಿಕೆಗೆ ಸರ್ಕಾರದಿಂದ ಅನುದಾನ ಬಂದ್ರು ಕೆಲಸ ಮಾಡಲ್ಲ ಅಂದ್ರೆ ಇದು ಅಧಿಕಾರಿಗಳ ನಿರ್ಲಕ್ಷ್ಯವೋ.. ಅಥವಾ ಜನರ ಮೇಲಿನ ತಾತ್ಸರವೋ.. ಇಲ್ಲವೇ ಜಾಣ ಕುರುಡರಾಗಿದ್ದಾರೋ ಗೊತ್ತಿಲ್ಲ..
ಯುಜಿಡಿ ಚೇಂಬರ್ಗಳಿಂದ ಉಕ್ಕುತ್ತಿರೋ ನೀರು.. ಗಲೀಜು ನೀರು ತುಂಬಿಕೊಂಡು ರಸ್ತೆ ಕೆರೆಯಂತಾದ್ರೆ... ಮನೆ ಅಂಗಳದವರೆಗೂ ಗಲೀಜು ನೀರು ನುಗ್ಗಿದ್ದು, ನಿವಾಸಿಗಳಿಗೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಗಲೀಜು ನೀರಿನಲ್ಲೇ ವಾಹನ ಸವಾರರು ಮೂಗುಮುಚ್ಚಿಕೊಂಡು, ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸುವ ಪರಿಸ್ಥಿತಿ... ಇಂತಹ ಕೆಟ್ಟ ಪರಿಸ್ಥಿತಿ ಗಾರ್ಡನ್ ಸಿಟಿಯ ಜನರು ಕಳೆದ ಎರಡು ದಿನಗಳಿಂದ ಅನುಭವಿಸ್ತಾ ಇದ್ರು ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ತಾ ಇಲ್ಲ.. ಹೀಗಾಗಿ ಇಲ್ಲಿನ ಜನರು ಮಾತ್ರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.
ಇನ್ನು ಯುಜಿಡಿ ನೀರು ಭಾರಿ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ಓಡಾಡುವುದಕ್ಕೂ ಕೂಡ ತುಂಬಾ ತೊಂದರೆ ಆಗ್ತಾ ಇದೆ ರೋಗಗಳು ಹರಡುವ ಬೀದಿಯಲ್ಲಿ ನಾವಿದ್ದೇವೆ.. ಆದಷ್ಟು ಬೇಗ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಅಂತ ಸ್ಥಳೀಯರು ಮನವಿ ಮಾಡಿದರು.
ಇನ್ನು ಗಾರ್ಡನ್ ರಸ್ತೆ ಮಾರ್ಗವಾಗಿ ಮಾಜಿ ಸಚಿವ ಸೋಮಣ್ಣ ಸಾಗುವಾಗ, ಗಾರ್ಡನ್ ರಸ್ತೆಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡರು. ಪ್ರತಿ ಬಾರಿ ಮಳೆಗಾಲದಲ್ಲೂ ಕೂಡ ಇಲ್ಲಿ ಇದೇ ರೀತಿಯ ಸಮಸ್ಯೆ ಮರುಕಳಿಸುತ್ತಿದೆ. ಎಷ್ಟೋ ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ರು ಕೂಡ ನೋಯೂಸ್ ಎಂದು ಅಧಿಕಾರಿಗಳ ವಿರುದ್ಧ ಸೊಗಡು ಶಿವಣ್ಣ ಗರಂ ಆದ್ರು.