ಬೆಂಗಳೂರು : ಸೂಟ್ ಕೇಸ್ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆ

ಬೆಂಗಳೂರು : ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಮಾನವೀಯತೆಯನ್ನು ತಲೆತಗ್ಗಿಸುವ ಭೀಕರ ಘಟನೆ ನಡೆದಿದೆ. ರೈಲ್ವೆ ಬ್ರಿಡ್ಜ್ ಸಮೀಪದಲ್ಲಿ ಒಂದು ಬಡ್ತಿ ಬಿದ್ದ ಸೂಟ್‌ಕೇಸ್ ಪತ್ತೆಯಾಗಿದ್ದು, ಅದರಲ್ಲಿ ಸುಮಾರು ಹತ್ತು ವರ್ಷದ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ.

ಪ್ರಮುಖ ಟ್ರಾಫಿಕ್ ಹೊಂದಿರುವ ಹೊಸೂರು ಮುಖ್ಯರಸ್ತೆಯ ಸಮೀಪದ ಈ ಸ್ಥಳದಲ್ಲಿ ಈ ರೀತಿಯ ಘಟನೆ ವರದಿಯಾಗಿರುವುದು ಶಾಕ್ ಉಂಟುಮಾಡಿದೆ. ಪ್ರಾಥಮಿಕ ಮಾಹಿತಿಯಂತೆ, ಬಾಲಕಿಯ ಶವವಿರುವ ಸೂಟ್‌ಕೇಸ್‌ ಅನ್ನು ಚಲಿಸುತ್ತಿದ್ದ ರೈಲಿನಿಂದ ಎಸೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಸೂಟ್‌ಕೇಸ್ ಪತ್ತೆಯಾದ ತಕ್ಷಣವೇ ಸೂರ್ಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಹೆಚ್ಚಿನ ತನಿಖೆಗಾಗಿ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಇಲಾಖೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ಬಾಲಕಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಶವದ ಗುರುತು ಮತ್ತು ಘಟನೆಗೆ ಕಾರಣಗಳ ಬಗ್ಗೆ ಮಾಹಿತಿ ಲಭಿಸುವ ನಿರೀಕ್ಷೆಯಿದೆ. ಯಾರಾದರೂ  ಬಾಲಕಿಯನ್ನು ಗುರುತಿಸಬಲ್ಲವರಿದ್ದರೆ, ತಕ್ಷಣವೇ ಪೊಲೀಸರು ಅಥವಾ ಸ್ಥಳೀಯ ಠಾಣೆಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

 

Author:

...
Keerthana J

Copy Editor

prajashakthi tv

share
No Reviews