CHIKKABALLAPURA: ನಂದೀಶ್ವರ ವಿಗ್ರಹದ ತಲೆ ಧ್ವಂಸ ಮಾಡಿದ ದುಷ್ಕರ್ಮಿಗಳು

ಚಿಕ್ಕಬಳ್ಳಾಪುರ: 

ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪೂಜೆ ಸಲ್ಲಿಸುತ್ತಿದ್ದ ದೇವಸ್ಥಾನದ ಬಳಿ ನಂದೀಶ್ವರನ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡದಿದ್ದು, ಈ ವಿಚಾರ ನಗರದಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ಅಪರಿಚಿತ ವ್ಯಕ್ತಿಗಳ ಅಟ್ಟಹಾಸಕ್ಕೆ ದೇವಸ್ಥಾನದ ಮುಂಭಾಗ ಇದ್ದ ನಂದಿ ವಿಗ್ರಹ ಧ್ವಂಸವಾಗಿರುವತಂಹ ಘಟನೆ ಕಳೆದ ರಾತ್ರಿ ವೇಳೆ ನಡೆದಿದೆ. ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ನಗರದ ಮರಳು ಸಿದ್ದೇಶ್ವರ ದೇವಸ್ಥಾನದ ಬಳಿ   ಘಟನೆ ನಡೆದಿದ್ದು, ಸದ್ಯ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನೆಲೆ ನಿಂತಿದೆ.

ಇನ್ನು ಅಪಚಿತ ವ್ಯಕ್ತಿಗಳು ರಾತ್ರಿ ವೇಳೆ ದೇವಸ್ಥಾನದ ಆವರಣಕ್ಕೆ ನುಗ್ಗಿ ದೇವಸ್ಥಾನದ ಮುಂಭಾಗ ಇರುವ ನಂದೀಶ್ವರನ ತಲೆಯನ್ನ ಧ್ವಂಸ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.ಇನ್ನು ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದಂತಹ ರಸ್ತೆಯ ಪಕ್ಕದಲ್ಲಿರುವ ದೇವಸ್ಥಾನದಲ್ಲಿ ಇಂತಹ ಕೃತ್ಯ ನಡೆದಿದ್ದು,ಘಟನೆಗೆ ಸಂಭವಿಸಿದಂತೆ ಪೊಲೀಸರ ವೈಫಲ್ಯ ಎತ್ತಿ ತೋರಿಸುತ್ತಿದೆ.ಇನ್ನೂ ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆ ಮಾಡಿ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಟ್ಟಾರೇ‌ಪ್ರತಿನಿತ್ಯ ನೂರಾರು ಜನ ಭಕ್ತಾಧಿಗಳು ಪೂಜೆ ಸಲ್ಲಿಸುತ್ತಿದ್ದ ದೇವಸ್ಥಾನ ಬಳಿ ವಿಗ್ರಹ ಧ್ವಂಸ ಕೃತ್ಯ ನಡೆದಿರುವುದರ ಹಿಂದೆ ಇರುವುದಾದ್ರು ಯಾರು ಎಂಬುವುದು ದೊಡ್ಡ ಮಟ್ಟದಲ್ಲಿ  ಚರ್ಚೆಯಾಗಿದೆ. ಇಂತಹ ವಿದ್ವಂಸಕ್ಕೆ ಕೃತ್ಯವೆಸಗಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ.

 

Author:

...
Keerthana J

Copy Editor

prajashakthi tv

share
No Reviews