ಶಿರಾ:
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಆರಕ್ಷಕ ಸಿಬ್ಬಂದಿಗಳ ವಸತಿ ಗೃಹದಲ್ಲಿರುವ ಸುಮಾರು ಆರು ವಸತಿ ಗೃಹಗಳ ಪರಿಸ್ಥಿತಿ ಹೇಲತೀರದಾಗಿದೆ. ವಸತಿ ಗೃಹದ ಕಟ್ಟದ ಚಾವಣಿಯ ಕಾಂಕ್ರೀಟ್ ಉದುರಿಬಿದ್ದು ಹಾಳಾಗಿದೆ. ಹಾಳಾಗಿರುವ ಕಟ್ಟಡವನ್ನು ದುರಸ್ತಿ ಕಾರ್ಯ ಮಾಡಲು ಯಾಕೋ ಅಧಿಕಾರಿಗಳಿಗೆ ಮನಸ್ಸಿಲ್ಲ ಅನ್ನಿಸುತ್ತೆ. ಇದರಿಂದಾಗಿ ಪಕ್ಕದಲ್ಲಿಯೇ ವಾಸಿಸುವ ಪೊಲೀಸ್ ಸಿಬ್ಬಂದಿಗಳು ಜೀವಭಯದಲ್ಲಿಯೇ ವಾಸಿಸುವಂತಾಗಿದೆ
ಇನ್ನು ಮೇಲ್ನೋಟಕ್ಕೆ ಪೊಲೀಸರಿಗೇನು ಕಡಿಮೆ, ಕೈ ತುಂಬಾ ಆದಾಯ, ಬೇಕಾದಷ್ಟು ಸೌಕರ್ಯ, ಯಾವುದಕ್ಕೂ ಕೊರತೆ ಇಲ್ಲ ಎಂಬ ಮಾತು ಸಾರ್ವಜನಿಕವಾಗಿ ಸದಾ ಕೇಳಿ ಬರುತ್ತದೆ. ಆದರೆ ಸ್ವಲ್ಪ ಒಳಹೊಕ್ಕು ನೋಡಿದಾಗ ತಿಳಿಯುತ್ತೆ ಪೊಲೀಸರ ಪರಿಸ್ಥಿತಿ ಎಂತಹದ್ದು ಅಂತ. ಅದಕ್ಕೆ ನಿದರ್ಶನವೇ ಕಳ್ಳಂಬೆಳ್ಳದಲ್ಲಿರುವ ವಸತಿ ಗೃಹಗಳ ಪರಿಸ್ಥಿತಿ.
ಇನ್ನು ತಾಲ್ಲೂಕಿನಲ್ಲಿ ಉನ್ನತ ಅಧಿಕಾರಿಯಿಂದ ಹಿಡಿದು ಸಾಮಾನ್ಯ ಪೊಲೀಸ್ ಪೇದೆ ತನಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪೈಕಿ ಕೆಲವೇ ಸಿಬ್ಬಂದಿಗೆ ಮಾತ್ರ ವಸತಿ ಸೌಕರ್ಯ ಸಿಕ್ಕಿದ್ದು, ಇನ್ನುಳಿದಂತೆ ಸಿಬ್ಬಂದಿಗಳು ದಶಕಗಳಿಂದ ವಸತಿ ಇಲ್ಲದೆ ಪರದಾಡುತ್ತಿದ್ದಾರೆ ಎನ್ನಲಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಬಲವೂ ಹೆಚ್ಚುತ್ತಿದೆ. ಆದರೆ, ಇದಕ್ಕೆ ಪೂರಕವಾಗಿ ವಸತಿ ಸೌಕರ್ಯ ಮಾತ್ರ ಹೆಚ್ಚದೆ ಇಡೀ ಇಲಾಖೆ ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನು ಕಟ್ಟಡಗಳಲ್ಲಿ ವಾಸಿಸುತ್ತಿದ್ದ ಸಿಬ್ಬಂದಿಗಳನ್ನು ಪಕ್ಕದಲ್ಲಿಯೇ ನೂತನವಾಗಿ ನಿರ್ಮಿಸಿದ್ದ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಇನ್ನು ಈ ಕಟ್ಟಡಗಳು ಪಾಳುಬಿದ್ದು ನಾಯಿಗಳ ವಾಸಸ್ಥಾನವಾಗಿದೆ. ಇಲ್ಲಿ ಪೊಲೀಸ್ ಸಿಬ್ಬಂದಿಗಳ ಮಕ್ಕಳೇ ಆಟವಾಡುತ್ತಾರೆ. ಒಂದು ವೇಳೆ ಅಲ್ಲಿರುವ ನಾಯಿಗಳು ಆ ಮಕ್ಕಳ ಮೇಲೆ ದಾಳಿ ಮಾಡಿದ್ರೆ ಗತಿ ಏನು. ಒಂದು ಕಡೆ ಪಾಳುಬಿದ್ದಿರುವ ಕಟ್ಟಡವಾದ್ರೆ ಮತ್ತೊಂದೆಡೆ ನಾಯಿಗಳ ಕಾಟ. ಈ ಸಂಬಂಧವಾಗಿ ಹಲವು ಬಾರಿ ಅಧಿಕಾರಿಗಳಿಗೆ ಸಾರ್ವಜನಿಕರೇ ಮಾಹಿತಿ ನೀಡಿದ್ರು ಯಾಕೋ ತಲೆಕೊಡಿಸಿಕೊಂಡಿಲ್ಲ ಮೇಲಾಧಿಕಾರಿಗಳು ಅಂತಾರೆ ಸಾರ್ವಜನಿಕರು.
ಈ ರೀತಿ ಪಾಳು ಬಿದ್ದಿರುವ ಕಟ್ಟಡಗಳಿಂದಾಗಿ ಪಕ್ಕದಲ್ಲಿಯೇ ವಾಸಿಸುವ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಕಟ್ಟಡಗಳಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಅವಘಡ ಸಂಭವಿಸಿ ಪ್ರಾಣಹಾನಿ ಆಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಅಲ್ಲಿ ವಾಸಿಸುವ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರ ಜೀವಕ್ಕೆ ನೀವೆ ಹೊಣೆಗಾರರಾಗಬೇಕಿದೆ.