SANDLEWOOD : ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಬಹುಭಾಷಾ ಸಿನಿಮಾ ‘ಚೌಕಿದಾರ್’ ಟೀಸರ್ ಇದೀಗ ಅಧಿಕೃತವಾಗಿ ಬಿಡುಗಡೆಯಾಗಿದೆ. ಪೃಥ್ವಿ ಅಂಬರ್ ಹಾಗೂ ಧನ್ಯಾ ರಾಮ್ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಟೀಸರ್, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಪೃಥ್ವಿ, ಟೀಸರ್ನಲ್ಲಿ ರಕ್ತಸಿಕ್ತ ಖಾಕಿ ಲುಕ್ನಲ್ಲಿ ಬಿಫೋರ್-ಅಂಡ್-ಆಫ್ಟರ್ ಶೈಲಿಯ ಅವತಾರ ತಾಳಿದ್ದು, ಅವರ ಭಿನ್ನ ಶೈಲಿ ಪಾತ್ರ ನಿರೂಪಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕಿ ಧನ್ಯಾ ರಾಮ್ಕುಮಾರ್ ಡಿ-ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಪ್ರಯೋಗವನ್ನು ಪರಿಗಣಿಸಬಹುದಾದುದು.
ಹಿರಿಯ ನಟ ಸಾಯಿ ಕುಮಾರ್, ಪೃಥ್ವಿಯ ತಂದೆ ಪಾತ್ರದಲ್ಲಿ ಗಂಭೀರ ನಿರೂಪಣೆಯೊಂದಿಗೆ ಗಮನ ಸೆಳೆದಿದ್ದಾರೆ. ಸುಧಾರಾಣಿ ಖದರ್ ಲುಕ್ನಲ್ಲಿ ನಟಿಸುತ್ತಿದ್ದು, ಅವರ ಪಾತ್ರಕ್ಕೆ ಚರಿತ್ರಾತ್ಮಕ ಸ್ಪರ್ಶವಿದೆ. ಚಿತ್ರದಲ್ಲಿ ಧರ್ಮ, ಶ್ವೇತಾ, ಮತ್ತಿತರ ಹಿರಿಯ ಕಲಾವಿದರು ಬಲಿಷ್ಠ ತಾರಾಬಳಗವಾಗಿ ನಟಿಸಿದ್ದಾರೆ.
ಟೀಸರ್ನಲ್ಲಿ ಎಲ್ಲ ಪಾತ್ರಗಳನ್ನು ಪರಿಚಯಿಸಲಾಗಿದ್ದರೂ, ನಿರ್ದೇಶಕ ಬಂಡಿಯಪ್ಪ ಕಥೆಯ ರಹಸ್ಯವನ್ನು ಬಿಟ್ಟುಕೊಡದೇ, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದಾರೆ.ಜೂನ್ 1ರಂದು ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗು ವುದು.ಚಿತ್ರವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಿಸುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಣದಲ್ಲಿ ಭಾಗವಹಿಸಿದ್ದಾರೆ.