ಶಿರಾ:
ಗುರು ದೇವೋ ಭವ. ಅಂತಾ ಗುರುವನ್ನು ಪೂಜ್ಯ ಭಾವದಿಂದ ಕಾಣುತ್ತಾರೆ.. ಆದ್ರೆ ಶಾಲಾ ಮಕ್ಕಳ ಕೈಯಿಂದಲೇ ಕೆಲಸ ಮಾಡಿಸೋದು, ಮಕ್ಕಳ ಮೇಲೆ ಹಲ್ಲೆ ನಡೆಸುವಂತಹ ಅಮಾನವೀಯ ಕೃತ್ಯಗಳು ಅಲ್ಲಲ್ಲಿ ಬೆಳಕಿಗೆ ಬರ್ತಾನೆ ಇರ್ತಾವೆ.. ಶಿರಾ ತಾಲೂಕಿನ ಬೇವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಕಸ ವಿಲೇವಾರಿ ಮಾಡಿದ ಘಟನೆ ಮಾಸುವ ಮುನ್ನವೇ ಶಿರಾದಲ್ಲಿ ವಿದ್ಯಾರ್ಥಿ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರೋ ಘಟನೆ ಬೆಳಕಿಗೆ ಬಂದಿದೆ.
ಶಿರಾ ನಗರದ ಕರಾಡಿಮೊಲ್ಲಾದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಮಲ್ಲೇಶ್ ವಿದ್ಯಾರ್ಥಿ ರೆಹಮಾನ್ ಕೆನ್ನೆ ಹಾಗೂ ಬೆನ್ನಿಗೆ ಬಾಸುಂಡೆ ಬರುವಂತೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೋಷಕರು ಆರೋಪ ಮಾಡ್ತಾ ಇದ್ದಾರೆ. ಘಟನೆ ನಡೆದ ಬಳಿಕ ವಿದ್ಯಾರ್ಥಿ ಪೋಷಕರು ವಿದ್ಯಾರ್ಥಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಳಿ ಹಲ್ಲೆ ನಡೆದಿರುವ ಬಗ್ಗೆ ತೋರಿಸಿದ್ದಾರೆ. ಕೈ ಬೆರಳುಗಳ ಗುರುತು ದೇಹದ ಮೇಲೆ ಬಿದ್ದಿದ್ದು ಇಂತಹ ಶಿಕ್ಷಕ ಮಕ್ಕಳಿಗೆ ಯಾವ ರೀತಿ ಪಾಠ ಮಾಡಲು ಸಾಧ್ಯ? ಶಿಕ್ಷಕ ಮಲ್ಲೇಶ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಪೋಷಕರು ಒತ್ತಾಯಿಸಿದರು.
ಬಳಿಕ ಶಿಕ್ಷಕ ಮಲ್ಲೇಶ್ ಅವರನ್ನು BEO ಕೃಷ್ಣಪ್ಪ ಕರೆಸಿ ಚರ್ಚೆ ನಡೆಸಿದ್ದಾರೆ. ಪೋಷಕರ ಸಮುಖದಲ್ಲೇ ಚರ್ಚೆ ನಡೆಸಿ ಮುಂದೆ ಈ ರೀತಿ ಘಟನೆ ಆಗದಂತೆ ಎಚ್ಚರವಹಿಸಿ ಎಂದು ಸೂಚನೆ ನೀಡಿ ಕಳುಹಿಸಿದ್ದಾರೆ.