ಬೆಂಗಳೂರು :
ವೃದ್ದೆಯೊಬ್ಬರು ವಾಕಿಂಗ್ ಮಾಡುತ್ತಿದ್ದಾಗ ಕಳ್ಳನೋರ್ವ ವೃದ್ದೆಯ ಸರ ಕಸಿದು ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಎಂಸಿ ಲೇಔಟ್ ನ 12ನೇ ಕ್ರಾಸ್ ನಲ್ಲಿ ನಡೆದಿದೆ.
ಮಾರೇನಹಳ್ಳಿಯ 60 ವರ್ಷದ ವೃದ್ದೆಯೊಬ್ಬರು ದಿನನಿತ್ಯದಂತೆ ಇಂದು ಮುಂಜಾನೆ 6.15 ರ ವೇಳೆಗೆ ರಸ್ತೆಯಲ್ಲಿ ವಾಕಿಂಗ್ ಮಾಡ್ತಾ ಇದ್ದಾಗ ವೃದೆಯನ್ನು ಹಿಂಬಾಲಿಸಿ ಬರ್ತಿದ್ದ ಕಳ್ಳ ಸಮಯ ನೋಡಿ ವೃದ್ದೆಯ ಕೊರಳಲ್ಲಿದ್ದ 38 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ.
ಸದ್ಯ ಈ ಕುರಿತು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಸರಗಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.