ತುಮಕೂರು : ಈ ಸಮಾಜದಲ್ಲಿ ಬಡವರಿಗೆ ನ್ಯಾಯ ಎಲ್ಲಿದೆ ಅನ್ನೋ ಪ್ರಶ್ನೆಯಾಗಿಯೇ ಉಳಿದಿದೆ. ಸತ್ಯ ಯಾವತ್ತಿದ್ರು ಕಹಿನೇ ಅನ್ನೋದಕ್ಕೆ ಇದೊಂದು ಸಾಕ್ಷಿ.. ಪ್ರಜಾಶಕ್ತಿ ಟಿವಿ ಕಳೆದ ಶನಿವಾರ ಅಂತರಸನಹಳ್ಳಿ ಮಾರ್ಕೆಟ್‌ನಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಸಚಿವ ಪರಮೇಶ್ವರ್ ಬರ್ತಾರೆ ಅಂತಾ ಇಡೀ ಮಾರ್ಕೆಟ್‌ನನ್ನು ಫುಲ್ ಕ್ಲೀನ್ ಮಾಡಿದ್ರು. ಈ ವೇಳೆ ಪ್ರಜಾಶಕ್ತಿ ಟಿವಿಗೆ ಸ್ವಚ್ಛತೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದ ಬಡ ವ್ಯಾಪಾರಿ ಮೇಲೆ ಅಧಿಕಾರಿಗಳು ಹಾಗೂ ಪಾಲಿಕೆ ಸಿಬ್ಬಂದಿ ದರ್ಪ ತೋರಿದ್ದಲ್ದೇ, ತಮ್ಮ ಅಂಗಡಿಯನ್ನು ಎತ್ತಾಕಿಕೊಂಡು ಹೋಗಿದ್ದಾರಂತೆ..
ನಗರದ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಅಸ್ವಚ್ಛತೆಯ ತಾಂಡವ ಆಡ್ತಾ ಇತ್ತು.. ಗಬ್ಬೆದ್ದು ನಾರುತ್ತಿದ್ದ ಮಾರ್ಕೆಟ್‌ನನ್ನು ಸ್ವಚ್ಛ ಮಾಡಿಸುವ ಕೆಲಸವನ್ನು ಪಾಲಿಕೆ ಮಾಡ್ತಿರಲಿಲ್ಲ.. ಆದ್ರೆ ಅದ್ಯಾವಾಗ ಗೃಹ ಸಚಿವರ ಪರಮೇಶ್ವರ್ ಬರ್ತಾರೆ ಅಂತಾ ಗೊತ್ತಾಯ್ತೋ ಫುಲ್ ಅಲರ್ಟ್ ಆದ ಪಾಲಿಕೆ ಸಿಬ್ಬಂದಿ, ಜಿಲ್ಲಾಡಳಿತ ಒಂದೇ ದಿನದಲ್ಲಿ ಕಸ ಎತ್ತಿ, ನೀರು ಹಾಕಿ ಸ್ವಚ್ಛ ಮಾಡಿ ಪರಂಗೆ ಸ್ವಾಗತಿಸಲು ಮುಂದಾಗಿದ್ರು. ಈ ಬಗ್ಗೆ ಪ್ರಜಾಶಕ್ತಿ ಟಿವಿ ಧ್ವನಿ ಎತ್ತಿದ್ದು ಸಚಿವರು ಬಂದಾಗ ಮಾತ್ರನಾ ಸ್ವಚ್ಚತೆ ಮಾಡೋದು ಅಂತಾ ಪ್ರಶ್ನಿಸಿತ್ತು. ಸುದ್ದಿಯ ಭಾಗವಾಗಿ ಬಾಲಕೃಷ್ಣ ಎಂಬ ಬೀದಿ ಬದಿ ವ್ಯಾಪಾರಿಯೊಬ್ಬರು ಪ್ರಜಾಶಕ್ತಿ ಬಳಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ರು.
ಪ್ರಜಾಶಕ್ತಿ ಟಿವಿ ಬಳಿ ಸ್ವಚ್ಛತೆ ಬಗ್ಗೆ ಸತ್ಯವನ್ನು ಹಂಚಿಕೊಂಡ ವ್ಯಾಪಾರಿ ಬಾಲಕೃಷ್ಣ ಮೇಲೆ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಟಾರ್ಗೆಟ್ ಮಾಡಿ, ಅಧಿಕಾರಿಗಳು ಏಕಾಏಕಿ ಬಂದು ನಾವು ಇಲ್ಲದ ಟೈಂನಲ್ಲಿ ತಮ್ಮ ಅಂಗಡಿಯಲ್ಲಿದ್ದ ಸುಮಾರು 10 ಸಾವಿರ ಐಟಂನನ್ನು ಎತ್ತಾಕಿಕೊಂಡು ಹೋಗಿದ್ದಾರೆ. ನಾವು ಸುಂಕವನ್ನು ಕಟ್ಟಿದ್ರು ಅಂಗಡಿಯನ್ನ ತಗೊಂಡು ಹೋಗಿದ್ದಾರೆ.. ಇದಕ್ಕೆಲ್ಲ ಕಾರಣ ನಾನು ನಿಜ ಹೇಳಿರೋದು.. ಇನ್ನು ಅಂಗಡಿಯನ್ನು ತೆರವು ಮಾಡಬೇಕು ಅಂದ್ರೆ ಹೆಲ್ತ್ ಇನ್ಸ್‌ಪೆಕ್ಟರ್ ಇರಬೇಕಿತ್ತು. ಆದ್ರೆ ಅವರು ಬಂದಿಲ್ಲ. ಬದಲಾಗಿ ಮಾರುಕಟ್ಟೆಯ ಕ್ಲೀನರ್ ಹರೀಶ್ ಎಂಬುವವರು ನಮ್ಮ ಮೇಲೆ ದರ್ಪ ತೋರಿ ಅಂಗಡಿಯನ್ನು ತೆರವು ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಬಾಲಕೃಷ್ಣ ಕಿಡಿಕಾರಿದ್ರು.
ಅದೇನೆ ಆಗ್ಲಿ ಬಡವನ ಕೋಪ ದವಡೆಗೆ ಮೂಲ ಎಂಬಂತೆ ಮಾಧ್ಯಮದ ಮುಂದೆ ನಿಜಾಂಶ ಹೇಳಿದ್ದಕ್ಕೆ ಬಡ ವ್ಯಾಪಾರಿ ಮೇಲೆ ದರ್ಪ ತೋರಿದ್ದಲ್ದೇ, ಏಕಾಏಕಿ ಅಂಗಡಿ ಎತ್ತಾಕಿಕೊಂಡು ಹೋಗಿದ್ದಾರೆ.. ಮಾಧ್ಯಮದ ಮೇಲೆ ನಿಮ್ಮ ದರ್ಪ, ದಬ್ಬಾಳಿಕೆ ತೋರಿಸಲು ಆಗಲ್ಲ ಅಂತಾ ಬಡ ವ್ಯಾಪಾರಿ ಮೇಲೇ ನಿಮ್ಮ ದರ್ಪ ತೋರೋದು ಎಷ್ಟು ಸರಿ… ನಿತ್ಯ ಮಾರುಕಟ್ಟೆಯನ್ನು ಸ್ವಚ್ಛ ಮಾಡ್ತಾ ಇದಿದ್ರೆ ಯಾರ್ ಯಾಕೆ ಪ್ರಶ್ನೆ ಮಾಡ್ತಾರೆ... ನಿಮ್ಮ ಕೆಲಸವನ್ನು ನೀವು ಮಾಡಿದ್ರೆ ಮಾಧ್ಯಮದವರಾಗಲಿ ಅಥವಾ ಸಾರ್ವಜನಿಕರಾಗಲಿ ಯಾವುದೇ ಪ್ರಶ್ನೆ ಮಾಡೋದಿಲ್ಲ… ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ಬಡ ವ್ಯಾಪಾರಿಗೆ ಆದ ಅನ್ಯಾಯವನ್ನು ಸರಿಪಡಿಸಿಕೊಟ್ಟು ಮಾನವೀಯತೆ ಉಳಿಸಿಕೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.