ಗುಬ್ಬಿ :
ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚನೆ ಮಾಡಲಾಗಿದೆ. ನಿನ್ನೆಯಿಂದ ಜಾತಿ ಜನಗಣತಿ ಕಾರ್ಯಕ್ಕೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದ್ದು, ಗುಬ್ಬಯಲ್ಲಿ ತಹಶೀಲ್ದಾರ್ ಆರತಿ ತಾಲೂಕಿನಲ್ಲಿ ಜಾತಿ ಜನಗಣತಿಗೆ ಚಾಲನೆ ನೀಡಿದರು. ಪಟ್ಟಣದ ಬಾಬು ಜಗಜೀವನ್ ರಾಮ್ ನಗರದ 17 ನೇ ವಾರ್ಡ್ ನಲ್ಲಿ ನಡೆದ ಗಣತಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಜಾತಿ ಜನಗಣತಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ, ತಹಶೀಲ್ದಾರ್ ಆರತಿ ಅವರು ತಮ್ಮ ಕುಟುಂಬದ ಜಾತಿ ಉಪಜಾತಿ ಮತ್ತು ಇತರೆ ಮಾಹಿತಿಗಳನ್ನು ನಿಖರವಾಗಿ ಗಣತಿದಾರರಿಗೆ ನೀಡಬೇಕು, ಗಣತಿದಾರರು ಮನೆ ಬಾಗಿಲಿಗೆ ಬಂದು ಮೊಬೈಲ್ ಅಪ್ಲಿಕೇಶನ್ ಮೂಲಕ ಸಮೀಕ್ಷೆ ನಡೆಸಿ ದತ್ತಾಂಶಂಗಳನ್ನು ಸಂಗ್ರಹ ಮಾಡಲಾಗುತ್ತಿದ್ದು ಇದಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ ತಿಳಿಸಿದರು.
ಜಾತಿ ಜನಗಣತಿಗೆ ಚಾಲನೆ ನೀಡುವ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಬಿ.ಆರ್.ಸಿ ಮಧುಸೂದನ್, ಲೋಕನಾಥ್, ಗಣತಿದಾರ ಕುಮಾರ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಸೇರಿ ಹಲವರು ಉಪಸ್ಥಿತರಿದ್ದರು.