IPL 2025 : ಸೂರ್ಯಕುಮರ್ ಸ್ಫೋಟಕ ಅರ್ಧಶತಕ | ಕೊಡೆ ಹಿಡಿದು ಪ್ರಶಸ್ತಿ ಸ್ವೀಕಾರ

ಕ್ರಿಕೆಟ್‌ : ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್‌ಗಳ ಭರ್ಜರಿ ಜಯವನ್ನು ದಾಖಲಿಸಿದೆ. ಈ ಜಯದ ನಾಯಕನಾಗಿ ಮಿಂಚಿದವರು ಸೂರ್ಯಕುಮಾರ್ ಯಾದವ್. ಅವರು ಕಣಕ್ಕಿಳಿದ ಪಾರಿಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 180 ರನ್ ಬಾರಿಸಿತು. 4ನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್, ಕೇವಲ 43 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 7 ಬೌಂಡರಿಗಳ ಸಹಾಯದಿಂದ ಅಜೇಯ 73 ರನ್ ಗಳಿಸಿದರು. ಈ ಮೂಲಕ ತಂಡದ ಮೊತ್ತವನ್ನು ಭದ್ರಪಡಿಸಲು ಮಹತ್ವದ ಪಾತ್ರವಹಿಸಿದರು.

ಬಳಿಕ 181 ರನ್ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಬಳಗವು ಮುಂಬೈ ಬೌಲರ್‌ಗಳ ದಾಳಿಗೆ ತತ್ತರಿಸಿ 18.2 ಓವರ್‌ಗಳಲ್ಲಿ ಕೇವಲ 121 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಜೇಸನ್ ಬೆಹ್ರೆನ್‌ಡಾರ್ಫ್ ಪ್ರಮುಖವಾದ ಅಟ್ಟಹಾಸ ನಡೆಸಿದರು.

ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೇರಿದೆ. ಇತ್ತ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯಲು ಸೂರ್ಯಕುಮಾರ್ ಯಾದವ್ ಕೊಡೆ ಹಿಡಿದು ಬಂದು ಎಲ್ಲರ ಗಮನ ಸೆಳೆದರು. ಇದೀಗ ಈ ಈ ಪಂದ್ಯಕ್ಕೂ ಮುನ್ನ ನನ್ನ ಹೆಂಡತಿ ಹೇಳಿದ್ದಳು – ಈಗಾಗಲೇ 13 ಪಂದ್ಯಗಳು ಮುಗಿದಿವೆ. ನಿನ್ನ ಪಾಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಮಾತ್ರ ಬಾಕಿ ಇದೆ ಎಂದು. ಇಂದು ಆ ಕನಸು ನನಸಾಯಿತು. ಈ ಇನ್ನಿಂಗ್ಸ್ ನನ್ನೆಲ್ಲ ಗೆಲುವುಗಳಿಗಿಂತ ವಿಶೇಷವಾದದ್ದು. ಈ ಪ್ರಶಸ್ತಿ ನನ್ನ ಹೆಂಡತಿಗೆ ಸಮರ್ಪಿತ. ಎಂದು ಹೇಳಿದ್ದಾರೆ.

Author:

...
Keerthana J

Copy Editor

prajashakthi tv

share
No Reviews