ಮಧುಗಿರಿ : ಸ್ತ್ರೀ ಶಕ್ತಿ ಸಂಘದ ಜಾಗ ಒತ್ತುವರಿ ತೆರವಿಗೆ ಅಧಿಕಾರಿಗಳ ಮೀನಾಮೇಷಾ?

ಮಧುಗಿರಿ : ಮಧುಗಿರಿ ತಾಲ್ಲೂಕಿನ ಪುರವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ ಕಟ್ಟಡ ನಿರ್ಮಿಸಿಕೊಳ್ಳಲು ಗ್ರಾಮ ಪಂಚಾಯ್ತಿ ವತಿಯಿಂದ ಭೂಮಿ ಮಂಜೂರಾಗಿತ್ತು. ಆದರೆ ಕಟ್ಟಡ ನಿರ್ಮಾಣವಾಗದೆ ಅನಾಥವಾಗಿದ್ದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಾಮಚಂದ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಪುರವರ ಗ್ರಾಮ ಪಂಚಾಯ್ತಿಯಲ್ಲಿ ಸ್ತ್ರೀ ಶಕ್ತಿ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದಲೇ 2006 ರಲ್ಲಿ ಖಾತಾ ನಂ.160/28 ರಲ್ಲಿ ಜಾಗವನ್ನು ಮಂಜೂರು ಮಾಡಲಾಗಿತ್ತು. ಸ್ತ್ರೀ ಶಕ್ತಿ ಸಂಘದ ಕಟ್ಟಡಕ್ಕೆ ಜಾಗವನ್ನು ನೀಡಲು ಸಭಾ ನಡುವಳಿಯಲ್ಲೂ ತಿರ್ಮಾನಿಸಲಾಗಿತ್ತು. ಅದರೆ, ಸಕಾಲಕ್ಕೆ ಮಂಜೂರಾಗಿದ್ದ ಜಾಗದಲ್ಲಿ ಸ್ತ್ರೀಶಕ್ತಿ ಸಂಘದ ಕಟ್ಟಡ ನಿರ್ಮಾಣವಾಗಿರಲಿಲ್ಲ. ಇದನ್ನೇ ಕಾಯುತ್ತಿದ್ದ ಭೂಗಳ್ಳರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಜಾಗದ ಒತ್ತುವರಿಗೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ರಾಮಚಂದ್ರಪ್ಪ ಮಾತನಾಡಿ, ಜಾಗ ಒತ್ತುವರಿ ಸಂಬಂಧವಾಗಿ ನಾನು ಆರ್‌ಟಿಐನಲ್ಲಿ ಮಾಹಿತಿಯನ್ನು ಪಡೆದುಕೊಂಡಿದ್ದು, ಜಾಗ ಒತ್ತುವರಿಯಾಗಿರುವುದು ದೃಡವಾಗಿದೆ. ಈ ಬಗ್ಗೆ ಪಿಡಿಓಗೆ ಮನವಿ ಮಾಡಿಕೊಂಡರು ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ತಾಲೂಕು ಪಂಚಾಯ್ತಿ ಇಓ, ಜಿಲ್ಲಾ ಪಂ ಸಿಇಓ ಹಾಗು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರ ಗಮನಕ್ಕೆ ತರಲು ಕಾನೂನು ಹೋರಾಟ ಮಾಡುತ್ತಿದ್ದೇನೆ ಎಂದರು.

ಪಿಡಿಓ ಧನಂಜಯ್‌ ಮಾತನಾಡಿ, ಖಾತಾ ನಂ.160/28 ರಲ್ಲಿರುವ ಸ್ತ್ರೀ ಶಕ್ತಿ ಸಂಘದ ಕಟ್ಟಡ ನಿರ್ಮಾಣಕ್ಕೆ ಮೀಸಲಿದ್ದ ಜಾಗ ಒತ್ತುವರಿಯಾಗಿದೆ ಅನ್ನೋ ಮಾಹಿತಿ ಬಂದಿದೆ. ಸರ್ಕಾರದಿಂದ ಬಂದಿರುವ ಆದೇಶದಂತೆ ಒತ್ತುವರಿಯಾಗಿದ್ದರೆ ತೆರವುಗೊಳಿಸುವ ಕಾರ್ಯವನ್ನು ಮಾಡುತ್ತೇವೆ ಎಂದರು.

ಅದೇನೆ ಇರಲಿ ತಮ್ಮ ಗ್ರಾಮದಲ್ಲಿನ ಮಹಿಳೆಯರ ಒಳಿತಿಗಾಗಿ ನೀಡಿರುವ ಜಮೀನನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವುದು ಶೋಚನೀಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾಗ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

Author:

...
Sushmitha N

Copy Editor

prajashakthi tv

share
No Reviews