ಕೊರಟಗೆರೆ:
ಗೃಹ ಸಚಿವರ ತವರು ಕ್ಷೇತ್ರದಲ್ಲೇ SSLC ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಗೂಡ್ಸ್ ವಾಹನದಲ್ಲಿ ಕರೆದೊಯ್ದಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ. ಹೌದು ಕೊರಟಗೆರೆ ತಾಲೂಕು ಬೈರೇನಹಳ್ಳಿಯ ಶ್ರೀರಂಗನಾಥ ಪ್ರೌಢಶಾಲೆ ಸುಮಾರು 28 ಮಂದಿ ಮಕ್ಕಳನ್ನ ಅಕ್ಕಿರಾಂಪುರ ಪರೀಕ್ಷಾ ಕೇಂದ್ರಕ್ಕೆ ಗೂಡ್ಸ್ ವಾಹನದಲ್ಲಿ ಕರೆದೊಯ್ಯಲಾಗಿತ್ತು. ಈ ವೇಳೆ ಲಾರಿಯನ್ನು ತಪ್ಪಿಸಲು ಸೇತುವೆ ಬಳಿ ಗೂಡ್ಸ್ ವಾಹನವನ್ನು ಎಡಕ್ಕೆ ತಿರುಗಿಸಿದ್ದು, ದೊಡ್ಡ ಅನಾಹುತದಿಂದ ಶಾಲಾ ಮಕ್ಕಳು ಪಾರಾಗಿದ್ದಾರೆ.
ಇನ್ನು ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಿಂದ ಅಕ್ಕಿರಾಂಪುರಕ್ಕೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬೇರೆ ಆರಂಭವಾಗಿದ್ದು ಸರಿಯಾದ ಸಮಯಕ್ಕೆ ಖಾಸಗಿ ಬಸ್ ಆಗಲಿ, ಸರ್ಕಾರಿ ಬಸ್ ಆಗಲಿ ಸಿಗಲಿಲ್ಲ.. ಹೀಗಾಗಿ ಎಸ್ಎಸ್ಎಲ್ಸಿ ಮಕ್ಕಳನ್ನು ಆದಷ್ಟು ಬೇಗ ಪರೀಕ್ಷೆಗೆ ಕರೆದೊಯ್ಯುವ ನಿಟ್ಟಿನಲ್ಲಿ ಶಾಲಾ ಮಕ್ಕಳನ್ನು ಗೂಡ್ಸ್ ವಾಹನದಲ್ಲಿ ಕರೆದೊಯ್ಯಲಾಗಿದೆ ಎಂದು ಮುಖ್ಯಶಿಕ್ಷರು ತಿಳಿಸಿದ್ದಾರೆ.
ಬೈರೇನಹಳ್ಳಿ ಗ್ರಾಮದಲ್ಲಿ ಬಸ್ ಸಮಸ್ಯೆ ಹೆಚ್ಚಾಗಿದ್ದು, ಮಕ್ಕಳನ್ನು ಶಾಲಾ- ಕಾಲೇಜಿಗೆ ಕಳುಹಿಸುವುದೇ ಪೋಷಕರಿಗೆ ದೊಡ್ಡ ಸಮಸ್ಯೆ ಆಗಿದೆ. ಅಟ್ ಲೀಸ್ಟ್ ಪರೀಕ್ಷೆ ಟೈಂ ಅಲ್ಲಿ ಆದ್ರು ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಬೇಕಿದೆ ಎಂದು ಪೋಷಕರು ಆಗ್ರಹಿಸಿದ್ರೆ, ಪರೀಕ್ಷೆ ಮುಗಿಯುವರೆಗೂ ಆದ್ರು ಸರ್ಕಾರಿ ಬಸ್ ನೀಡಿ ಎಂದು ವಿದ್ಯಾರ್ಥಿಗಳು ಒತ್ತಾಯ ಮಾಡಿದ್ರು.