ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ; ಫೆಬ್ರುವರಿ 13 ರಂದು ಕ್ಯಾಬಿನೆಟ್ ಮೀಟಿಂಗ್ ಫಿಕ್ಸ್ !

ಇದೇ ಮೊದಲ ಬಾರಿಗೆ ಗಡಿ ಜಿಲ್ಲೆಯಲ್ಲಿ ಸಭೆ
ಇದೇ ಮೊದಲ ಬಾರಿಗೆ ಗಡಿ ಜಿಲ್ಲೆಯಲ್ಲಿ ಸಭೆ
ಚಾಮರಾಜನಗರ

ರಾಜಧಾನಿಯಿಂದ ಹೊರಗೆ ಚಾಮರಾಜನಗರ ಜಿಲ್ಲಯೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಫೆಬ್ರವರಿ 13ರಂದು ನಡೆಯಲಿದೆ. ಈ ಸಭೆಯಿಂದಾಗಿ ಚಾಮರಾಜನಗರ. 2025 ರ ವರ್ಷ ಹಲವು ಅಭಿವೃದ್ಧಿಗಳ ನಿರೀಕ್ಷೆಯನ್ನು ಹುಟ್ಟುಹಾಕಿದೆ. 


ರಾಜ್ಯದ  ಪ್ರಸಿದ್ಧ  ಯಾತ್ರಾ  ಸ್ಥಳಗಳಲ್ಲಿ  ಒಂದಾಗಿರುವ  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.13 ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಚಾಮರಾಜನಗರ ಜಿಲ್ಲೆಗೆ ಅನುದಾನ, ಅಭಿವೃದ್ಧಿ ಹೊಳೆ ಹರಿಯುವ ನಿರೀಕ್ಷೆ ದಟ್ಟವಾಗಿದೆ. ಈಗಾಗ್ಲೆ ಜಿಲ್ಲಾಢಳಿತ ಸಚಿವ ಸಂಪುಟ ನಡೆಸಲು ಬೇಕಾಗುವ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.  ಬೆಳಗಾವಿ, ಕಲಬುರಗಿ ನಂತರ ಇದೇ ಮೊದಲ ಬಾರಿಗೆ  ಗಡಿ ಜಿಲ್ಲೆಯಲ್ಲಿ ಪರಿಪೂರ್ಣ  ಸಚಿವ ಸಂಪುಟ ಸಭೆ ನಡೆಯಲಿದೆ. ಫೆಬ್ರುವರಿ 13 ರಂದು  ಮಹದೇಶ್ವರ ಬೆಟ್ಟದಲ್ಲಿನ 108 ಅಡಿ ಮಹದೇಶ್ವರ ಪ್ರತಿಮೆ ಇರುವ ಸುಂದರ ಪರಿಸರದಲ್ಲಿ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಗಿರಿಜನರಿಗೆ ವಸತಿ ಸೇರಿದಂತೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಆಗುವ ನಿರೀಕ್ಷೆ ಇದೆ.

ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ಹೊತ್ತಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಎಸ್ಎಂಕೆ ಮಿನಿ ಸಚಿವ ಸಂಪುಟ ಸಭೆ ನಡೆಸಿದ್ದರು. ಅರಣ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರ ಸಭೆ ನಡೆಸಿ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದರು. ಇದೀಗಾ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ತೊಡೆದು ಹಾಕಿದ್ದ ಸಿಎಂ ಸಿದ್ದರಾಮಯ್ಯ ಈಗ  ಸಂಪುಟ ಸಭೆ ನಡೆಸಿ ವಿಶೇಷ ಪ್ಯಾಕೇಜ್, ವಿಶೇಷ ಯೋಜನೆ ಮೂಲಕ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಳಚಲಿ ಎಂಬುದೇ ಎಲ್ಲರ ಒತ್ತಾಸೆಯಾಗಿದೆ.

Author:

...
Reporter

ManyaSoft Admin

Ads in Post
share
No Reviews