ಶ್ರೀಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ತುಮಕೂರು
ಪಾವಗಡ: ಪಟ್ಟಣದ ಚಳ್ಳಕರೆ ರಸ್ತೆ ಸಮೀಪದ ಶ್ರೀ ಶಾಲ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ನ 9ನೇ ವರ್ಷದ ವಾರ್ಷಿಕೊತ್ಸವ ಸಮಾರಂಭ ಅದ್ದೂರಿಯಾಗಿ ಜರುಗಿತು. ಶ್ರೀ ಶಾಲ ಇಂಟರ್ ನ್ಯಾಷನಲ್ ಸ್ಕೂಲ್ನ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮೀ ವೆಂಕಟರಾಮಯ್ಯ ಮಾತನಾಡಿ ವಿದ್ಯೆ ಎಂಬುವುದು ಒಂದು ವಿನಯ ಹಾಗೂ ಉತ್ತಮ ಸಂಸ್ಕಾರದ ನಡೆಯಾಗಿದೆ.ವಿದ್ಯೆ ಕತ್ತಲು ದೂರ ಮಾಡಿ ಬೆಳಕಿನತ್ತ ಕೊಂಡ್ಯೊಯುತ್ತದೆ ಎಂದು ಹೇಳಿದರು.
ರಾಮಾಯಣ ಹಾಗೂ ಮಹಾಭಾರತ ಪ್ರಸಂಗ ಕುರಿತು ಮಕ್ಕಳಿಗೆ ಮನೆಯಲ್ಲಿ ಕಥೆ ಹೇಳಬೇಕು.ಹಾಗೂ ಮನೆಯ ವಾತಾವರಣ ಶುದ್ದ ಹಾಗೂ ಸ್ವಚ್ಚತೆಯಿಂದ ಕೂಡಿದ್ದರೆ ಮಕ್ಕಳಲ್ಲಿ ಉತ್ತಮ ನಡೆನುಡಿ ನೋಡಲು ಸಾಧ್ಯವಿದೆ ಎಂದರು. ಸಮಯಕ್ಕೆ ಹೆಚ್ಚು ಅದ್ಯತೆ ನೀಡಿ ಮನೆಯಲ್ಲಿ ಮಕ್ಕಳಿದ್ದ ವೇಳೆ ಫೋಷಕರು ಮೊಬೈಲ್ ಟಿವಿ ನೋಡುವುದು ಕಡಿಮೆ ಮಾಡಿದರೆ ಮಕ್ಕಳಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಾಧ್ಯವಿದೆ ಶ್ರೀಶಾಲ ಇಂಟರ್ ನ್ಯಾಷನಲ್ ಸ್ಕೂಲ್ನ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮೀ ವೆಂಕಟರಾಮಯ್ಯ ಹೇಳಿದರು.
ಶ್ರೀಶಾಲ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ.ಜಿ.ವೆಂಕಟರಾಮಯ್ಯ ಮಾತನಾಡಿ ಶಿಕ್ಷಕರ ಜತೆ ಮಕ್ಕಳ ವಿದ್ಯೆ ಬಗ್ಗೆ ಫೋಷಕರು ಹೆಚ್ಚು ನಿಗಾವಹಿಸಬೇಕು.ಮಕ್ಕಳಲ್ಲಿ ಸಮಯ ಪಾಲನೆ ಹಾಗೂ ಶಿಸ್ತು ರೂಪಿಸುವಲ್ಲಿ ಫೋಷಕರ ಪಾತ್ರ ಹೆಚ್ಚಿದೆ ಎಂದರು. ಈ ವೇಳೆ ಸಂಸ್ಥೆಯ ಉಪಾಧ್ಯಕ್ಷರಾದಂತಹ ಡಾ.ಶಶಿಕಿರಣ್ ಮತ್ತು ಪ್ರಾಂಶುಪಾಲರುಗಳಾದ ಮಂಜುಳಾ ಹಾಗೂ ಪುರಸಭೆ ಸದಸ್ಯರಾದ ಗುರುತಿ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.