CRICKET : ದಕ್ಷಿಣ ಆಫ್ರಿಕಾದ ಮಿಡಲ್-ಆರ್ಡರ್ ಬ್ಯಾಟ್ಸ್‌ಮನ್‌ ಹೆನ್ರಿಕ್ ಕ್ಲಾಸೆನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

CRICKET NEWS : ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಮತ್ತು ವಿಶ್ವದ ಟಿ20 ಲೀಗ್‌ಗಳಲ್ಲಿ ಬೇಡಿಕೆಯ ಆಟಗಾರರಾಗಿರುವ ಹೆನ್ರಿಕ್ ಕ್ಲಾಸೆನ್ [Heinrich Klaasen ]ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಈ ನಿರ್ಧಾರವನ್ನು ಇಂದು ಪ್ರಕಟಿಸಿದ್ದು, "ಇದು ನನಗೆ ದುಃಖದ ದಿನ, ಆದರೆ ನನ್ನ ಕುಟುಂಬದ ಭವಿಷ್ಯಕ್ಕೆ ಇದು ಸೂಕ್ತ ನಿರ್ಧಾರ" ಎಂದು ಹೇಳಿದ್ದಾರೆ.

2018ರ ಫೆಬ್ರವರಿ ತಿಂಗಳಲ್ಲಿ, ಕೇಪ್ ಟೌನ್‌ನಲ್ಲಿ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ಲಾಸೆನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ನಿರಂತರ ಆಟವಾಡಿದ ಅವರು, ವಿವಿಧ ಟೂರ್ನಮೆಂಟ್‌ಗಳಲ್ಲಿ ತಂಡಕ್ಕೆ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿದ್ದರು.

“ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯಲು ನಿರ್ಧರಿಸಿದ್ದೇನೆ ಎಂದು ಘೋಷಿಸುತ್ತಿರುವ ಈ ದಿನ ನನ್ನ ಜೀವನದ ಅತಿ ಕಠಿಣ ಕ್ಷಣಗಳಲ್ಲಿ ಒಂದಾಗಿದೆ. ನನ್ನ ಮನಸ್ಸಿನಲ್ಲಿ ಹಲವು ಬಾರಿ ಈ ವಿಚಾರ ಬಂದಿತ್ತು. ಕೊನೆಗೂ ನನ್ನ ಕುಟುಂಬ ಹಾಗೂ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಈಗ ನಾನು ಶಾಂತಿಯುತವಾಗಿದ್ದೇನೆ.” ಎಂದು ಅವರು Instagram ನಲ್ಲಿನ ಪೋಸ್ಟ್‌ನಲ್ಲಿ ವಿದಾಯ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಅಂತರರಾಷ್ಟ್ರೀಯ ಹಾದಿಗೆ ವಿದಾಯ ನೀಡಿದರೂ, ಕ್ಲಾಸೆನ್ ಖಾತರಿಯಾಗಿ ವಿಶ್ವದ ವಿವಿಧ ಲೀಗ್‌ಗಳಲ್ಲಿ ತಮ್ಮ ಬ್ಯಾಟಿಂಗ್ ನೈಪುಣ್ಯವನ್ನು ಮುಂದುವರಿಸಲಿದ್ದಾರೆ. ಅವರ ಕ್ರಿಕೆಟ್ ಜರ್ನಿಗೆ ಶುಭಾಶಯಗಳೊಂದಿಗೆ ಅಭಿಮಾನಿಗಳು, ಸಹ ಆಟಗಾರರು ವಿದಾಯ ಸೂಚಿಸುತ್ತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews