ರಾಜ್ಯದಲ್ಲಿ ಇಂದು ಸಾವಿನ ಶನಿವಾರವಾಗಿದ್ದು ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಬಳಿಯ ಟಿ.ಬೇಗೂರು ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ . ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಕಾರಿನ ಮೇಲೆ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಏಕಾಏಕಿ ಲಾರಿ ಕಾರಿನ ಮೇಲೆ ಬಿದ್ದಿದ್ದು, ಕಾರು ಫುಲ್ ಅಪ್ಪಚ್ಚಿಯಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಲಾರಿ ಪಲ್ಟಿಯಾಗಿದ್ದಿಂದ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಕಾರಿನಲ್ಲೇ ಅಪ್ಪಚ್ಚಿಯಾಗಿದ್ದಾರೆ. ಕ್ರೇನ್ನ ಮೂಲಕ ಕಾರಿನಲ್ಲಿದ್ದವರನ್ನು ಮೇಲೆತ್ತಿದ್ರು. ಸಂಪೂರ್ಣ ಅಪ್ಪಚ್ಚಿಯಾಗಿರುವ ಕಾರು ಬೆಂಗಳೂರು ರಿಜಿಸ್ಟೇಷನ್ ಹೊಂದಿದ್ದು, ಮೃತರ ಆರು ಮಂದಿ ವಿಜಯಪುರ ಮೂಲದವರು ಎಂದು ತಿಳಿದುಬಂದಿದ್ದು, ಕ್ರಿಸ್ಮಸ್ ರಜೆಗೆ ಊರಿಗೆ ಹೋಗುತ್ತಿದ್ದರು ಎನ್ನಲಾಗಿದೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಸರಣಿ ಅಪಘಾತ ನಡೆದಿದೆ. ಈಚರ್ ಕ್ಯಾಂಟರ್ ಬೆಂಗಳೂರು ಕಡೆಯಿಂದ ತುಮಕೂರಿಗೆ ಹೋಗ್ತಾ ಇದ್ದು, ಕ್ಯಾಂಟರ್ ಹಿಂದೆ ವೋಲ್ಟೋ ಕಾರು ಬರುತ್ತಿತ್ತು, ಅಲ್ದೇ ಪಕ್ಕದ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಕಂಟೇನರ್ ಲಾರಿಯೊಂದು ವೇಗವಾಗಿ ಬರ್ತಿದ್ದ ವೇಳೆ ಕಂಟೇನರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಹತ್ತಿ, ಎದುರುಗಡೆ ರಸ್ತೆಗೆ ಇಳಿದು ಕ್ಯಾಂಟರ್ಗೆ ಡಿಕ್ಕಿಯಾಗಿ ಹಿಂದೆ ಬರ್ತಿದ್ದ ವೋಲ್ಟೋ ಕಾರಿನ ಮೇಲೆ ಬಿದ್ದು ಅಪಘಾತ ಸಂಭವಿಸಿದೆ. ಇನ್ನು ಈ ಭೀಕರ ಅಪಘಾತದಲ್ಲಿ IAST ಕಂಪನಿ ಮಾಲೀಕನಾಗಿದ್ದ ಚಂದ್ರಮ್ ಯೇಗಪ್ಪಗೋಳ್ ಕುಟುಂಬದವರಾದ ಗೌರಾಬಾಯಿ, ವಿಜಯಲಕ್ಷ್ಮೀ, ದೀಕ್ಷಾ, ಜಾನ್, ಆರ್ಯ ಮೃತರಾಗಿದ್ದಾರೆ. ಭೀಕರ ಅಪಘಾತದಿಂದ ಸುಮಾರು 10 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಯ್ತು. ಅಲ್ದೇ ಅಪಘಾತದ ಭೀಕರತೆ ಕಂಡು ಪ್ರತ್ಯಕ್ಷದರ್ಶಿಗಳು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.