ಗ್ರಾಮ ಪಂಚಾಯ್ತಿಗೆ ಸೇರಿದ ಕಂದಾಯ ಹಣ ದುರುಪಯೋಗ ಪಡಿಸಿಕೊಂಡಿದ್ದ ಪಿಡಿಒ ಲಕ್ಷ್ಮೀ ಬಾಯಿಯನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯ್ತಿ ಸಿಇಒ ಜಿ. ಪ್ರಭು ಆದೇಶ ಹೊರಡಸಿದ್ದಾರೆ.. ಹೌದು ಶಿರಾ ತಾಲೂಕಿನ ನಾದೂರು ಗ್ರಾಮ ಪಂಚಾಯ್ತಿಗೆ 2024-25ನೇ ಸಾಲಿನ ಏಫ್ರಿಲ್ನಿಂದ ಡಿಸೆಂಬರ್ ಅಂತ್ಯದವರೆಗೆ ವಸೂಲಿ ಮಾಡಿದ್ದ ಕಂದಾಯದ ಹಣ 2.97 ಲಕ್ಷ ಹಣದಲ್ಲಿ ಅಧಿಕಾರಿ ದುರುಪಯೋಗ ಪಡಿಸಿಕೊಂಡಿದ್ರು. ದುರುಪಯೋಗ ಪಡಿಸಿಕೊಂಡಿದ್ದರಿಂದ ಪಿಡಿಒ ಲಕ್ಷ್ಮೀ ಬಾಯಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಸಿದ್ದಾರೆ.
ಹಾಲೇನಹಳ್ಳಿ ಗ್ರಾಮದಲ್ಲಿ ಯಾವುದೇ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದ, ಬಡಾವಣೆ ಅಭಿವೃದ್ಧಿಪಡಿಸದ ಸರ್ವೆ ನಂ.149/2 ರಲ್ಲಿ 34 ಗುಂಟೆ ಜಮೀನು ಭೂ ಪರಿವರ್ತನೆ ಮಾಡಿ ನಿವೇಶನಗಳಿಗೆ ಖಾತೆ ಮಾಡಿದ್ದಾರೆ. ಈ ಖಾತೆಗೆ ಸಂಬಂಧಿಸಿದಂತೆ ಮ್ಯೂಟೇಶನ್ ವಹಿಯಲ್ಲಿ ದಾಖಲೆ ಮಾಡಿಲ್ಲ. ಸಾಮಾನ್ಯ ಸಭೆ ನಡವಳಿಯಲ್ಲಿ ನಮೂದಿಸದೆ ಸರ್ಕಾರದ ಆದೇಶ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ್ದರು ಈ ಬಗ್ಗೆ ಪ್ರಜಾಶಕ್ತಿ ವರದಿ ಮಾಡಲಾಗಿದ್ದು, ವರದಿ ಬೆನ್ನಲ್ಲೇ ಇದೀಗ ಪಿಡಿಒ ಲಕ್ಷ್ಮಿಬಾಯಿ ಅವರನ್ನು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅಮಾನತು ಮಾಡಿದ್ದಾರೆ.