ಮನೆಯಲ್ಲೇ ಸಿಂಪಲ್‌ ಆಗಿ ಮಾಡಿಕೊಳ್ಳಿ ರುಚಿಯಾದ ಪನ್ನೀರ್‌ ಕಟ್ಲೇಟ್

ಪನೀರ್ ಕಟ್ಲೆಟ್ ಭಾರತೀಯ ಪ್ಯಾನ್-ಫ್ರೈಡ್ ಪ್ಯಾಟೀಸ್ ಆಗಿದ್ದು, ಪನೀರ್ ಅನ್ನು ಪ್ರಮುಖ ಘಟಕಾಂಶವಾಗಿ ತಯಾರಿಸಲಾಗುತ್ತದೆ. ಬೈಂಡಿಂಗ್ಗಾಗಿ ವಿವಿಧ ತರಕಾರಿಗಳು ಮತ್ತು ಬ್ರೆಡ್ ಅನ್ನು ಬಳಸಲಾಗುತ್ತದೆ. ಪನ್ನೀರ್‌ ಕಟ್ಲೇಟ್‌ ಅನ್ನು ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ, ಪನ್ನೀರ್‌ ಕಟ್ಲೇಟ್‌ ಮಾಡಲು ಬೇಕಾಗುವ ಪದಾರ್ಥಗಳು

400 ಗ್ರಾಂ ನಷ್ಟು ಪನ್ನೀರ್ , ಚಿಕ್ಕದಾಗಿ ಹೆಚ್ಚಿದ 1 ಈರುಳ್ಳಿ, ತುರಿದ ಕ್ಯಾರೆಟ್‌, ಚಿಕ್ಕದಾಗಿ ಹೆಚ್ಚಿದ ಎಲೆಕೋಸು 1 ಬಟ್ಟಲು, ಹೆಚ್ಚಿದ ಕ್ಯಾಪ್ಸಿಕಂ, ಬೇಯಿಸಿ ನುಣ್ಣಗೆ ಮಾಡಿದ 2 ಆಲೂಗಡ್ಡೆ, ಕತ್ತರಿಸಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ 1 ಚಮಚ, ಗರಂ ಮಸಾಲ ಅರ್ಧ ಚಮಚ, ಚಾಟ್‌ ಮಸಾಲ ಅರ್ಧ ಚಮಚ, ಜೀರಿಗೆ ಪುಡಿ ಅರ್ಧ ಚಮಚ, ಅಚ್ಚಕಾರದ ಪುಡಿ 1 ಚಮಚ, ಆಮ್‌ ಚೂರ್‌ ಪುಡಿ ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ ಸ್ವಲ್ಪ ಇವುಗಳನ್ನು ಹಾಕಿ ಪೇಸ್ಟ್‌ ತಯಾರಿಸಿಕೊಳ್ಳಬೇಕು.  ಕಾರ್ನ್ ಪ್ಲೋರ್- 4 ಟೇಬಲ್ ಚಮಚ, ಚಿಲ್ಲಿ ಫ್ಲೆಕ್ಸ್- ಅರ್ಧ ಚಮಚ. ಬ್ರೆಡ್ ಕ್ರಮ್ಸ್- ಸ್ವಲ್ಪ 

ಮಾಡುವ ವಿಧಾನ :

ಪನ್ನೀರ್ ಅನ್ನು ಪುಡಿ ಮಾಡಿಕೊಂಡು ಅದರೊಂದಿಗೆ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ತಯಾರಿಸಿಕೊಂಡ ಮಿಶ್ರಣದಿಂದ ದೊಡ್ಡ ದೊಡ್ಡ ಉಂಡೆಗಳನ್ನು ಮಾಡಿಕೊಂಡು ಅದನ್ನು ಸಮತಟ್ಟಾಗಿ ತಟ್ಟಿಕೊಳ್ಳಿ. ಒಂದು ಚಿಕ್ಕ ಬಟ್ಟಲಿಗೆ ಕಾರ್ನ್ ಫ್ಲೋರ್, ಚಿಲ್ಲಿ ಪ್ಲೆಕ್ಸ್ ಮತ್ತು ಸ್ವಲ್ಪ ನೀರನ್ನು ಹಾಕಿ ದೋಸೆ ಹಿಟ್ಟಿನ ಹದದಲ್ಲಿ ಕಲಸಿಕೊಳ್ಳಿ. ತಯಾರಿಸಿದ ಪನ್ನೀರ್ ಕಟ್ಲೆಟ್ ಅನ್ನು ಹಿಟ್ಟಿನಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಸ್ ಅದರ ಮೇಲೆ ಮತ್ತು ಸುತ್ತಲೂ ಹರಡಿ. ಎಲ್ಲವನ್ನು ಹೀಗೆ ಮಾಡಿ ತಟ್ಟೆಯಲ್ಲಿಟ್ಟುಕೊಳ್ಳಿ. ನಂತರ ಎಣ್ಣೆಯನ್ನು ಬಿಸಿ ಮಾಡಿಕೊಂಡು ತಯಾರಿಸಿಕೊಂಡ ಕಟ್ಲೆಟ್ನ್ನು ಹಾಕಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಕೆಂಬಣ್ಣಕ್ಕೆ ಬರುವರೆಗೆ ಬೇಯಿಸಿ ಎಣ್ಣೆಯಿಂದ ತೆಗೆಯಿರಿ. ಇದೀಗ ರುಚಿಕರವಾದ ಪನ್ನೀರ್ ಕಟ್ಲೆಟ್ ಸವಿಯಲು ಸಿದ್ಧ.

 

Author:

...
Editor

ManyaSoft Admin

share
No Reviews