ಗುಬ್ಬಿ : ತುಮಕೂರು ಜಿಲ್ಲೆಯ ರೈತರಿಗೆ ಭರ್ಜರಿ ಗಿಫ್ಟ್ ಕೊಟ್ಟ ತುಮುಲ್

ಗುಬ್ಬಿ :

ಗುಬ್ಬಿ ತಾಲೂಕಿನ ಹೊಸಪಾಳ್ಯ ಬಳಿಯ ತುಮಕೂರು ಹಾಲು ಉತ್ಪಾದಕರ ಸಂಘದ ಆಡಳಿತ ಕಚೇರಿಯಲ್ಲಿ ತುಮುಲ್‌ ಅಧ್ಯಕ್ಷ ಹೆಚ್‌.ವಿ ವೆಂಕಟೇಶ್‌ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಈ ವೇಳೆ ತುಮುಲ್ ನಿರ್ದೇಶಕರಾದ ಭಾರತಿ ಶ್ರೀನಿವಾಸ್, ಡಿ. ಕೃಷ್ಣಕುಮಾರ್, ಸಿದ್ದಗಂಗಯ್ಯ, ಶಿವಪ್ರಕಾಶ್, ಎಸ್.ಆರ್ ಗೌಡ, ಪ್ರಕಾಶ್ ಮಾದಿಹಳ್ಳಿ, ಮಹಾಲಿಂಗಯ್ಯ, ನಾಗೇಶ್ ಬಾಬು ಸೇರಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಶಾಸಕ, ತುಮುಲ್‌ ಅಧ್ಯಕ್ಷ ವೆಂಕಟೇಶ್‌, ರೈತರ ಸಂಕಷ್ಟ ಅರಿವಾಗಿದ್ದು ಪ್ರತಿ ಲೀಟರ್‌ ಹಾಲಿನ ಬೆಲೆ 4 ರೂಪಾಯಿ ಹೆಚ್ಚುವರಿ ಹಣವನ್ನು ರೈತರಿಗೆ ನೇರವಾಗಿ ಸಿಗುವಂತೆ ಯುಗಾದಿ ಹಬ್ಬಕ್ಕೆ ರೈತರಿಗೆ ಸಿಎಂ ಸಿದ್ದರಾಮಯ್ಯ ಗಿಫ್ಟ್‌ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ಅಲ್ಲದೇ ಆಡಳಿತ ಮಂಡಳಿ ಜಿಲ್ಲೆಯ ರೈತರಿಂದ ಕೊಂಡು ಕೊಳ್ಳುವ ಪ್ರತಿ ಲೀಟರ್ ಹಾಲಿಗೆ ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಜಾರಿಗೊಳಿಸಿದ್ದು, ಇದಕ್ಕೆ ಕಾರಣರಾದ ಜಿಲ್ಲೆಯ ಸಹಕಾರಿ ಸಚಿವರಾದ ಕೆ. ಎನ್ ರಾಜಣ್ಣ ಸೇರಿದಂತೆ ಪಶು ಸಂಗೋಪನಾ ಸಚಿವರಿಗೆ ನಮ್ಮ ಜಿಲ್ಲೆಯ ಎಲ್ಲಾ ಆಡಳಿತ ಮಂಡಳಿ ಸದಸ್ಯರ ಪರವಾಗಿ ಅಭಿನಂದನೆ ಎಂದು ತಿಳಿಸಿದರು.

Author:

...
Editor

ManyaSoft Admin

share
No Reviews