ಶಿರಾ :
ಶಿರಾ ನಗರ ಸೇರಿದಂತೆ ತಾಲೂಕಿನ ಹಲವೆಡೆ ಇಂದು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಚಿತ್ರದುರ್ಗ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದ ರಸ್ತೆ ಕಾಣದಂತಾಗಿ ಸವಾರರು ಪರದಾಡುವಂತಾಯಿತು. ಅಲ್ಲದೇ ಕಾರು ಚಾಲಕರು ದ್ವಿಚಕ್ರ ವಾಹನ ಸವಾರರು ಹಳದಿ ದೀಪ ಹಾಕಿಕೊಂಡು ನಿಧಾನಗತಿಯಲ್ಲಿ ಸಾಗಿದರು.
ಇನ್ನು ಕೆಲವೆಡೆ ಗಾಳಿ ಮಳೆಗೆ ಗಿಡ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ಅವಾಂತರ ಸೃಷ್ಟಿ ಮಾಡಿತು. ನಗರದ ಎಪಿಎಂಸಿ ರಸ್ತೆಯಲ್ಲಿ ಮಳೆಯಿಂದ ಚರಂಡಿಯಲ್ಲಿ ಕಟ್ಟಿಕೊಂಡಿದ್ದ ಕೊಳಚೆ ಮಳೆ ನೀರಿನೊಂದಿಗೆ ರಸ್ತೆ ಮೇಲೆ ಹರಿತಿದ್ದು, ಸ್ಥಳೀಯರು ಪರದಾಡುವಂತಾಯಿತು. ಅಲ್ದೇ ಶಿರಾ ನಗರಸಭೆ ಅಧಿಕಾರಿಗಳಿಗೆ ಚರಂಡಿ ಸ್ವಚ್ಚಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ, ಯಾವುದೇ ಕ್ರಮ ಕೈಗೊಂಡಿಲ್ಲ, ಅಲ್ದೇ ಮಳೆ ಬಂದಾಗಲೆಲ್ಲಾ ಚರಂಡಿ ನೀರು ತುಂಬಿಕೊಂಡಿದೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಜನರು ಕೆಲಕಾಲ ಪರದಾಡುವಂತಾಯಿತು.