ಗುಬ್ಬಿ : ತುಮಕೂರು ಜಿಲ್ಲೆಗೆ 7ನೇ ಸ್ಥಾನ ಪಡೆದ ಪ್ರಿಯಾ ಶಾಲಾ ಮಕ್ಕಳು

ಗುಬ್ಬಿ :

ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ತುಮಕೂರು ಜಿಲ್ಲೆಗೆ ಗುಬ್ಬಿ ತಾಲೂಕಿನ ಪ್ರಿಯಾ ಇಂಗ್ಲೀಷ್‌ ಸ್ಕೂಲ್‌ ವಿದ್ಯಾರ್ಥಿಗಳು ಏಳನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಿಯಾ ಇಂಗ್ಲೀಷ್‌ ಶಾಲೆ ಶೇಕಡಾ 95 ರಷ್ಟು ಫಲಿತಾಂಶ ಪಡೆಯುವ ಮೂಲಕ ಗುಬ್ಬಿ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಗುಬ್ಬಿ ತಾಲೂಕಿನ ಹಳ್ಳಿ-ಹಳ್ಳಿಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸುಮಾರು 43 ವರ್ಷಗಳ ಹಿಂದೆ ಪ್ರಿಯಾ ಇಂಗ್ಲೀಷ್‌ ಶಾಲೆಯನ್ನು ಆರಂಭಿಸಲಾಗಿತ್ತು. ಶಾಲೆಯ ಆರಂಭವಾದಾಗಿನಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಇಂದು ಈ ಸಾಧನೆಯ ಶಿಖರ ಏರುವಲ್ಲಿ ಯಶಸ್ವಿಯಾಗಿದೆ. ಪ್ರಿಯಾ ಇಂಗ್ಲೀಷ್‌ ಶಾಲೆಯ ಕುಶಾಂತ್‌ ಗೌಡ 625ಕ್ಕೆ 622 ಅಂಕಗಳನ್ನು ಪಡೆಯುವ ಮೂಲಕ ಗುಬ್ಬಿ ತಾಲೂಕಿಗೆ ಪ್ರಿಯಾ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇನ್ನು ಲೇಖ ಶ್ರೀ 625ಕ್ಕೆ 604 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ದ್ವೀತೀಯ ಸ್ಥಾನವನ್ನು ಪಡೆದುಕೊಂಡಿದ್ದರೆ, ಸಾಯಿನಿಧಿ 601 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರಿಯ ಇಂಗ್ಲೀಷ್‌ ಸ್ಕೂಲ್‌ನ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಸ್ಟಿಂಗ್ಷನ್‌ ಆಗಿ ಪಾಸ್‌ ಆಗಿದ್ದು ಶಾಲೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.

ಟಾಪರ್‌ ಆದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಟಾಪರ್‌ ಕುಶಾಂತ್‌ ಗೌಡ, ಶಾಲೆಯಲ್ಲಿ ಪ್ರಿನ್ಸಿಪಾಲ್‌, ಟೀಚರ್ಸ್‌ ಸರ್ಪೋಟ್‌ನಿಂದ ಇಷ್ಟು ಮಾರ್ಕ್ಸ್‌ ತೆಗೆಯಲು ಸಾಧ್ಯ ಆಯ್ತು ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಿಯಾ ಇಂಗ್ಲೀಷ್‌  ಶಾಲೆಗೆ ಟಾಪರ್‌ ಆಗಿರೋ ಸಾಯಿನಿಧಿ, ಲೇಖ ಶ್ರೀ ಮಾತನಾಡಿ, ನಮಗೆ ಎಷ್ಟೇ ಡೌಟ್‌ ಬಂದರೂ ಟೀಚರ್ಸ್‌ ಬೇಜಾರಾಗದೇ ನಮಗೆ ಹೇಳಿಕೊಡ್ತಾ ಇದ್ದರು, ಜೊತೆಗೆ ಈ ಶಾಲೆಯಲ್ಲಿ ಕೋಚಿಂಗ್‌ ಉತ್ತಮವಾಗಿದ್ದರಿಂದ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯ ಆಯ್ತು ಎಂದು ಹೇಳಿದರು.

ಇನ್ನು ಪ್ರಿಯಾ ಇಂಗ್ಲೀಷ್‌ ಶಾಲಾ ಮಕ್ಕಳ ಸಾಧನೆಗೆ ಶಾಲೆಯ ಛೆರ್‌ಮೆನ್‌ ಮಾತನಾಡಿ, ಶಾಲೆಯ ಮಕ್ಕಳು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರ ಎರ್ಫರ್ಟ್‌ ಹೆಚ್ಚಿದೆ. ನಿರೀಕ್ಷೆಯಂತೆ ಒಳ್ಳೆಯ ಫಲಿತಾಂಶದ ಜೊತೆಗೆ ತಾಲೂಕಿಗೆ ಪ್ರಿಯಾ ಶಾಲೆ ಟಾಪರ್‌ ಆಗಿರೋದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಶಾಲೆ ಆರಂಭದಿಂದಲೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡ್ತಾ ಬಂದಿರೋ ಪ್ರಿಯಾ ಇಂಗ್ಲೀಷ್‌ ಸ್ಕೂಲ್‌ನ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಂತಾಗಿದೆ. ಈ ಬಾರಿಯ SSLC ಫಲಿತಾಂಶದಲ್ಲಿ ಶಾಲೆಗೆ 95ರಷ್ಟು ಫಲಿತಾಂಶ ಬಂದಿದ್ದು, ಮುಂದಿನ ವರ್ಷ ಇದಕ್ಕಿಂತ ಹೆಚ್ಚು ಫಲಿತಾಂಶ ಪಡೆಯುವ ನಿರೀಕ್ಷೆಯನ್ನು ಶಾಲಾ ಆಡಳಿತ ಮಂಡಳಿ ಹೊಂದಿದೆ.

Author:

...
Sushmitha N

Copy Editor

prajashakthi tv

share
No Reviews