TUMAKURU : ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಆಕ್ಸಿಡೆಂಟ್‌ | ಚಾಲಕ ಸ್ಥಳದಲ್ಲೇ ಸಾವು

TUMAKURU NEWS : ಟ್ರಕ್‌ ಹಾಗೂ ಬೊಲೆರೋ‌ ಗೂಡ್ಸ್ ನಡುವೆ ಭೀಕರ ಅಪಘಾತ ಸಂಭವಿಸಿ, ಬೊಲೆರೋ ವಾಹನ ಚಾಲಕ ಸ್ಥಳದಲ್ಲಿಯೇ ಸಾವನ್ನಪಿರುವ ಘಟನೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ-48 ಹಿರೇಹಳ್ಳಿ ಸಮೀಪವಿರುವ ಇಂಡಿಯನ್‌ ಪೆಟ್ರೊಲ್‌ ಬಂಕ್‌ ಬಳಿ ನಡೆದಿದೆ.

ಬೆಂಗಳೂರು ಕಡೆಯಿಂದ ಶಿರಾಗೆ ತೆರಳುತ್ತಿದ್ದ ಬೊಲೆರೋ ವಾಹನಕ್ಕೆ ಹಿಂದಿನಿಂದ ಬಂದ ಗೂಡ್ಸ್‌ ಟ್ರಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೋ ವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತಪಟ್ಟ ಬೊಲೆರೋ ವಾಹನ ಸವಾರನನ್ನು ಶಿರಾ ಮೂಲದವನು ಎನ್ನಲಾಗಿದೆ. ಹಿಂಬದಿಯಿಂದ ಬಂದ ಗೂಡ್ಸ್‌ ಟ್ರಕ್‌ ರಸ್ತೆಯ ಡಿವೈಡರ್‌ ದಾಟಿ ಬೊಲೆರೋಗೆ ಡಿಕ್ಕಿ ಹೊಡಿದಿದೆ. ಅಪಘಾತದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇನ್ನು ವಿಷಯ ತಿಳಿದ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದಾವಿಸಿ ಕಾರ್ಯಾಚರಣೆಗೆ ಮುಂದಾದ್ರು, ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

 

Author:

...
Keerthana J

Copy Editor

prajashakthi tv

share
No Reviews